ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಲಗೇಜ್ ಮಿತಿಗಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ. ವಿಮಾನ ಪ್ರಯಾಣದಂತೆ ಇದೀಗ ರೈಲು ಪ್ರಯಾಣಕ್ಕೂ ಲಗೇಜ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ಪ್ರಯಾಣಿಕರ ಪ್ರಯಾಣ ವರ್ಗದ ಆಧಾರದಲ್ಲಿ ಈಗಾಗಲೇ ಉಚಿತ ಲಗೇಜ್ ಭತ್ಯೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಆ ಮಿತಿಯನ್ನು ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದರು.
ಲಗೇಜ್ ಮಿತಿ ವಿವರ
ಎರಡನೇ ದರ್ಜೆ (Second Class):
35 ಕೆಜಿ ವರೆಗೆ ಉಚಿತ
70 ಕೆಜಿ ವರೆಗೆ ಶುಲ್ಕ ಪಾವತಿಸಿ ಸಾಗಿಸಬಹುದು
ಸ್ಟೀಪರ್ ಕ್ಲಾಸ್:
40 ಕೆಜಿ ವರೆಗೆ ಉಚಿತ
80 ಕೆಜಿ ವರೆಗೆ ಹೆಚ್ಚುವರಿ ಶುಲ್ಕದೊಂದಿಗೆ ಅನುಮತಿ
ಎಸಿ 3-ಟೈರ್ ಮತ್ತು ಚೇರ್ ಕಾರ್:
ಗರಿಷ್ಠ 40 ಕೆಜಿ ಮಾತ್ರ ಅನುಮತಿ
ಇದಕ್ಕಿಂತ ಹೆಚ್ಚು ತೂಕ ಸಾಗಿಸುವುದು ನಿಯಮ ಉಲ್ಲಂಘನೆಯಾಗಿದೆ.
ಪ್ರಥಮ ದರ್ಜೆ ಮತ್ತು ‘ಎಸಿ ಟೂ ಟೈರ್:
50 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅನುಮತಿಸಲಾಗಿದೆ, ಗರಿಷ್ಠ ಮಿತಿ 100 ಕೆಜಿ. ಯಾಗಿದೆ.
ಎಸಿ ಪ್ರಥಮ ದರ್ಜೆ:
70 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು, ಅದಾಗ್ಯೂ 150 ಕೆಜಿ ವರೆಗೆ ಲಗೇಜ್ ಅನ್ನು ಶುಲ್ಕ ಪಾವತಿಸುವ ಮೂಲಕ ಸಾಗಿಸಬಹುದು.
ಲಗೇಜ್ ಅಳತೆ:
100 ಸೆಂ.ಮೀ ಉದ್ದ, 60 ಸೆಂ.ಮೀ ಅಗಲ ಮತ್ತು 25 ಸೆಂ.ಮೀ ಎತ್ತರದವರೆಗಿನ ಬಾಹ್ಯ ಅಳತೆಗಳನ್ನು ಹೊಂದಿರುವ ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಪೆಟ್ಟಿಗೆಗಳನ್ನು ಪ್ರಯಾಣಿಕರ ಕೋಚ್‌ಗಳಲ್ಲಿ ವೈಯಕ್ತಿಕ ಸಾಮಾನುಗಳಾಗಿ ಸಾಗಿಸಲು ಅನುಮತಿಸಲಾಗಿದೆ.
ಬಾಹ್ಯ ಅಳತೆಗಳನ್ನು ಮೀರಿದ ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಪೆಟ್ಟಿಗೆಗಳಿದ್ದರೆ, ಅಂತಹ ವಸ್ತುಗಳನ್ನು ಪ್ರಯಾಣಿಕರ ಕೋಚ್‌ಗಳಲ್ಲಿ ಸಾಗಿಸದೆ ಅವನ್ನು ಬ್ರೇಕ್ ವ್ಯಾನ್ (SLR)/ಪಾರ್ಸೆಲ್ ವ್ಯಾನ್‌ನಲ್ಲಿ ಬುಕ್ ಮಾಡಿ ಸಾಗಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವೈಯಕ್ತಿಕ ಸಾಮಾನುಗಳಾಗಿ ಕೋಚ್‌ನಲ್ಲಿ ವಾಣಿಜ್ಯ ಸರಕುಗಳನ್ನು ಕಾಯ್ದಿರಿಸಲು ಮತ್ತು ಸಾಗಿಸಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ