ಉಳ್ಳಾಲ: ಕಿನ್ಯಾ ಕೇಂದ್ರ ಜುಮಾ ಮಸೀದಿಯ ಸನಿಹದಲ್ಲೇ ಯಶಸ್ವಿ ಕಾರ್ಯಾಚರಣೆಯೊಂದಿಗೆ ಮುನ್ನುಗ್ಗುತ್ತಿರುವ “ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ)”.(ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ) 2020 ನವೆಂಬರ್ ನಲ್ಲಿ ಅಸ್ತಿತ್ವಕ್ಕೆ ತರಲಾದ ಈ ಸಂಸ್ಥೆಯ ವತಿಯಿಂದ ಕಳೆದ ಐದು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಸಮಸ್ಯೆ ಸಂಬಂಧಿತ ಕಾರ್ಯಗಳಲ್ಲಿ ನೆರವನ್ನು ನೀಡುತ್ತಾ ಬಂದಿದೆ.
2025 ನೇ ಸಾಲಿನಲ್ಲಿ ಸಂಸ್ಥೆಯು ಆಯೋಜಿಸಿದ ಯಶಸ್ವಿ ಯೋಜನೆಗಳೆಂದರೆ,
ವಾರದ ತಪಾಸಣಾ ಕ್ಲಿನಿಕ್:
(ಊರಿನ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳ ವಿತರಣೆ)
ಮಾಸಿಕ ಜೀವ ರಕ್ಷಕ ಔಷಧಿಗಳ ವಿತರಣೆ:
(ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ರೋಗಿಗಳ ಜೀವ ರಕ್ಷಣೆಗೆ ಅಗತ್ಯವಾದ ಮಾಸಿಕ ಜೀವ ರಕ್ಷಕ ಔಷಧಿಗಳ ವಿತರಣೆ)
ಡಯಾಲಿಸಿಸ್ ಗಾಗಿ ಮಾಸಿಕ ಆರ್ಥಿಕ ನೆರವು:
(ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ರೋಗಿಯ ಜೀವ ರಕ್ಷಣೆಗೆ ಅತ್ಯಗತ್ಯವಾದ ಡಯಾಲಿಸಿಸ್ ನಡೆಸಲು ಆರ್ಥಿಕ ನೆರವು)
ತುರ್ತು ಉಪಯೋಗಕ್ಕಾಗಿ ವೈದ್ಯಕೀಯ ಸಲಕರಣೆಗಳ ನೆರವು:
(ರೋಗಿಗಳ ತುರ್ತು ಉಪಯೋಗಕ್ಕೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳಾದ ಹಾಸ್ಪಿಟಲ್ ಕಾಟ್, ವ್ಹೀಲ್ ಚೇರ್, ವಾಕರ್, ವಾಟರ್ ಬೆಡ್, ಏರ್ ಬೆಡ್, ನೆಬುಲೈಝರ್ ಇತ್ಯಾದಿಗಳ ನೆರವು)
ಬಡವರ ತುರ್ತು ಚಿಕಿತ್ಸೆಗೆ ನೆರವು:
(ಆರ್ಥಿಕವಾಗಿ ತೀರಾ ಹಿಂದುಳಿದ ಅತ್ಯಂತ ಬಡ ಕುಟುಂಬದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ನೆರವು)
ವೈದ್ಯಕೀಯ ತಪಾಸಣಾ ಶಿಬಿರಗಳು:
(ವಿವಿಧ ವೈದ್ಯಕೀಯ ವಿಭಾಗದಲ್ಲಿ ನುರಿತ ವೈದ್ಯರಿಂದ ತಪಾಸಣಾ ಶಿಬಿರಗಳು)
ವೈದ್ಯಕೀಯ ಮಾಹಿತಿ ಹಾಗೂ ಪ್ರಾತ್ಯಕ್ಷಿಕಾ ಶಿಬಿರಗಳು:
(ದಿನನಿತ್ಯ ಜೀವನದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ತಿಳಿವಳಿಕೆ (councelling) ಹಾಗೂ ಪ್ರಾತ್ಯಕ್ಷಿಕೆಗಳ (demonstration) ಶಿಬಿರಗಳು)
ಮುಂತಾದವುಗಳನ್ನು ಊರಿನವರ ಸಹಾಯ, ಸಹಕಾರದಿಂದ ಸಂಸ್ಥೆಯು ಯಶಸ್ವಿಯಾಗಿ ಪೂರ್ತೀಕರಿಸಿದೆ.
ಸಂಸ್ಥೆಯ ವಿಳಾಸ:
ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ) ಕಿನ್ಯ.
(ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ)
ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಾಂಪ್ಲೆಕ್ಸ್, ಕೇಂದ್ರ ಜುಮಾ ಮಸೀದಿಯ ಹತ್ತಿರ, ಕಿನ್ಯ ಗ್ರಾಮ, ಉಳ್ಳಾಲ ತಾಲೂಕು.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)