ಮಂಗಳೂರು: ವ್ಯಸನ ಮುಕ್ತಿ ದಾರಿಗೆ ಅರಿವಿನ ಮೊಂಬತ್ತಿ ಎಂಬ ದ್ಯೇಯವಾಕ್ಯದೊಂದಿಗೆ ಅಲ್ ಸಲಾಮ ಖಿದ್ಮ ಫೌಂಡೇಶನ್ ವತಿಯಿಂದ ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್ ಆಗಸ್ಟ್ 9ರಂದು ಉದ್ಘಾಟನೆಗೊಳಿಸಲಾಯಿತು.
ಕಚೇರಿಯನ್ನು ಸಂಸ್ಥೆಯ ನಿರ್ದೇಶಕರಾದ ಎಸ್ ಎಂ ಆರ್ ರಶೀದ್ ಹಾಜಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಇದು ಕೇವಲ ವ್ಯಸನ ಮುಕ್ತಿ ಮಾತ್ರವಲ್ಲ, ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮವು ನಡೆಯುವ ಮೂಲಕ ಸಮಾಜಕ್ಕೆ ಮಾದರಿಯಗಲಿವೆ.
ಒಳ್ಳೆಯ ಟೀಮ್ ಕಟ್ಟಿಕೊಂಡು ಮುನ್ನಡೆಯುವ ಈ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ. ಮುಂದಕ್ಕೆ ಸರಕಾರದಿಂದ ಸ್ಥಳವನ್ನು ಖರೀದಿಸುವ ಬಗ್ಗೆ ಆಲೋಚಿಸಲಾಗುವುದೆಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಜಿ ಏ ಬಾವಾ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಶರೀಫ್ ಹಾಜಿ ವೖಟ್ ಸ್ಟೋನ್ 8 ತಿಂಗಳ ಯೋಜನೆಯನ್ನು ಮಂಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಭಾರತ್ ಮುಸ್ತಫಾ ಗ್ರಂಥಾಲಯ ಉದ್ಘಾಟಿಸಿ ಸಲಹೆ ಸೂಚನೆ ನೀಡಿದರು. ಉದ್ಯಮಿ ಆಸೀಫ್ ಹೋಂ ಪ್ಲಸ್ ಹೆಲ್ತ್ ಸೆಂಟರ್ ಉದ್ಘಾಟನೆ ನಡೆಸಿದರೆ ಡಾ.ಯು ಟಿ ಇಫ್ತಿಖಾರ್ ಅಲೀ ಕೌನ್ಸಿಲ್ ರೂಂ ಉದ್ಘಾಟಿಸಿದರು. ನಂತರ ಪ್ರಾರ್ಥನಾ ಕೊಠಡಿಯನ್ನು ಅಝ್ಗರಲೀ ಡೆಕ್ಕನ್ ನೆರವೇರಿಸಿದರು.
ತಾಜುದ್ದೀನ್ ರಹ್ಮಾನಿ,ಹೈದರ್ ಪೆರ್ತಿಪ್ಪಾಡಿ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಸ್ವಾಗತ್ ಹಾಜಿ, ಮುಹಮ್ಮದ್ ದೇರಳಕಟ್ಟೆ,ಇಕ್ಬಾಲ್ ಕೋಲ್ಪೆ, ಅಬೂಬಕರ್ ಬೆಳ್ಳಾರೆ ಅಬ್ದುಲ್ ಖಾದರ್ ಬೆಳ್ಳಾರೆ, ಝೖನುಲ್ ಆಭಿದ್, ಮುಝಫರ್ ಅಹ್ಮದ್, ಅಡ್ವಕೇಟ್ ಇಸಾಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇಕ್ಬಾಲ್ ಬಾಳಿಲ ಸ್ವಾಗತಿಸಿ ಶೖಖ್ ಮುಹಮ್ಮದ್ ಇರ್ಫಾನಿ ಫೖಝಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ