ಶೈಖುನಾ ಕುರ್ರತುಸ್ಸಾದತ್ ಕೂರತ್ ತಂಙಳ್ ಅನುಸ್ಮರಣೆ
ದುಬೈ: ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ 1500 ನೇ ಜನ್ಮದಿನಾಚರಣೆ ಅಂಗವಾಗಿ ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ‘ಗ್ರಾಂಡ್ ಮೀಲಾದ್ ಕಾನ್ಫರೆನ್ಸ್’ ಸೆಪ್ಟೆಂಬರ್ 7 ರಂದು ದುಬೈಯಲ್ಲಿ ನಡೆಯಲಿದ್ದು, ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಹಾಗೂ ಕೂರತ್ ತಂಙಳರ ಅನುಸ್ಮರಣೆ ಕಾರ್ಯಕ್ರಮವನ್ನು ಇತ್ತೀಚಿಗೆ ದುಬೈ ದೇರಾ ಫ್ಲೋರಿಡಾ ಸಿಟಿ ಹೋಟೆಲ್ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಯ್ಯಿದ್ ಮುಹಮ್ಮದ್ ಶಾಫಿ ತಂಙಳ್ ಬಾಅಲವಿ ಮದೀನಾ ಮುನವ್ವರ ರವರು ಪ್ರಾರ್ಥನೆ ನೆರವೇರಿಸಿದರು, ಸಯ್ಯಿದ್ ತ್ವಾಹಾ ತಂಙಳ್ ಉದ್ಘಾಟನೆ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕೆಸಿಎಫ್ ದುಬೈ ನೋರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಮದನಿ ನಗರ ವಹಿಸಿದ್ದರು.
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಜಲೀಲ್ ನಿಝಾಮಿ, KCF ಯುಎಇ ರಾಷ್ಟೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಮೂಸಾ ಹಾಜಿ ಬಸರ,
ಪ್ರಕಾಶನ ವಿಭಾಗದ ಅಧ್ಯಕ್ಷರಾದ ಅಬ್ದುಲ್ ರಹೀಮ್ ಕೋಡಿ, ದುಬೈ ನಾರ್ತ್ ಝೋನ್ ಪ್ರೊಫೆಶನಲ್ ವಿಭಾಗದ ಸದಸ್ಯರಾದ ದಾವೂದ್ ಮಾಸ್ಟರ್, ಅಶ್ರಫ್ ಹಾಜಿ ಅಡ್ಯಾರ್, ಅಬೂಬಕರ್ ಹಾಜಿ ಕೊಟ್ಟಮುಡಿ, ಕೆಸಿಎಫ್ ದುಬೈ ನೋರ್ತ್ ಝೋನ್ ಪ್ರದಾನ ಕಾರ್ಯದರ್ಶಿ ಲೆತೀಫ್ ಫಾತೂರ್
ನಿಯಾಝ್ ಬಸರ ,ರಿಯಾಝ್ ಕೊಂಡಂಗೇರಿ
ಹಂಝ ಸಖಾಫಿ ಕೊಟ್ಟಮುಡಿ
ಅಶ್ರಫ್ ಮದನಿ ನೆಕ್ಕಿಲ್
ಅಬ್ದುಲ್ಲಾ ಸಖಾಫಿ ಕೊಟ್ಟಮುಡಿ
ಮುಂತಾದವರು ಉಪಸ್ಥಿತರಿದ್ದರು.
ಮೀಲಾದ್ ಸ್ವಾಗತ ಸಮಿತಿ
ಚೇರ್ಮೆನ್
ಅಬ್ದುಲ್ ರಝ್ಝಾಕ್ ಹಾಜಿ DEWA
ಜನರಲ್ ಕನ್ವೀನರ್
ದಾವೂದ್ ಮಾಸ್ಟರ್ ಪಂಜ
ಫೈನಾನ್ಸ್ ಚೇರ್ಮೆನ್
ಇಬ್ರಾಹಿಂ ಹಾಜಿ ಕಿನ್ಯ
ಕೆಸಿಎಫ್ ದುಬೈ ನಾರ್ತ್ ಝೋನ್ ಶಿಕ್ಷಣ ವಿಭಾಗ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ ಸ್ವಾಗತಿಸಿ
ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಹಬೀಬ್ ಸಜಿಪ ಕಾರ್ಯಕ್ರಮ ನಿರೂಪಿಸಿದರು, ಮುಸ್ತಫಾ ಮಾಸ್ಟರ್ ಧನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ