ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಎಸ್ವೈಎಸ್ ರಾಜ್ಯ ಸಮಿತಿಯ ವತಿಯಿಂದ ಜುಲೈ 14,15 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸೌಹಾರ್ದ ಸಂಚಾರ ನಡೆಯಲಿದೆ. ಈ ಪ್ರಯುಕ್ತ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಕೇಂದ್ರಗಳ ಸ್ವಾಗತ ಸಮಿತಿ ರೂಪೀಕರಣ ಸಭೆಯು ಜುಲೈ 4 ಹಾಗೂ 6 ರಂದು ನಡೆಯಲಿದೆ.
ಬಿ.ಸಿ ರೋಡ್ ಕೇಂದ್ರದ ಸ್ವಾಗತ ಸಮಿತಿಯು ಜುಲೈ 4 ಸಂಜೆ 4:30 ಗಂಟೆಗೆ ಎಸ್ಎಸ್ ಆಡಿಟೋರಿಯಂ ಪಾಣೆಮಂಗಳೂರು ಹಾಗೂ ಕಲ್ಲಡ್ಕ ಕೇಂದ್ರದ ಸ್ವಾಗತ ಸಮಿತಿಯು ಜುಲೈ 4 ಸಂಜೆ 7:00 ಗಂಟೆಗೆ ದಾರುಲ್ ಅಶ್ಅರಿಯ್ಯಾ ಸುರಿಬೈಲು ಹಾಗೂ ಮಂಗಳೂರು ಮತ್ತು ಪರಂಗಿಪೇಟೆ ಕೇಂದ್ರದ ಸ್ವಾಗತ ಸಮಿತಿಯು ಜುಲೈ 6 ಬೆಳಿಗ್ಗೆ 7 ಗಂಟೆಗೆ ಅಲ್ ಹಸನ್ ಅಕಾಡಮಿ ಬೀರ್ಪುಗುಡ್ಡೆ, ಅಡ್ಯಾರ್ ನಲ್ಲಿ ನಡೆಯಲಿದೆ ಎಂದು ಎಸ್ವೈಎಸ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








