ಮಂಗಳೂರು: ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಕಾಸರಗೋಡು ಸಂಯುಕ್ತ ಜಮಾಅತ್ಗಳ ಸಭೆ ಹಾಗೂ “ಮೊಹಲ್ಲಾ ವ್ಯವಸ್ಥೆಯ ಮೂಲಕ ಸಮುದಾಯದ ಸಬಲೀಕರಣ” ಯೋಜನೆ ಪಂಪ್ವೆಲ್ ತಖ್ವಾ ಮಸೀದಿಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮವು ಕೇರಳ SSF ಅಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್ ರವರ ದುಆದೊಂದಿಗೆ ಆರಂಭಗೊಂಡಿತು. ಝೈನಿ ಕಾಮಿಲ್ ಸಖಾಫಿ ಸ್ವಾಗತ ಭಾಷಣ ಮಾಡಿದರೆ, ಡಾ. ಅಬ್ದುಲ್ ಹಕೀಮ್ ಅಝ್ಹರಿ ಉಸ್ತಾದರು ಸಭೆಯನ್ನು ಉದ್ಘಾಟಿಸಿ, ಹಿಂದಿನ ಕಾಲದ ಮಸೀದಿ ಮತ್ತು ಮಹಲ್ಲಾಗಳ ನೇತೃತ್ವದ ಮಾದರಿ ಹಾಗೂ ಸಮಾಜಕ್ಕೆ ನೀಡಿರುವ ಸೇವೆಯನ್ನು ಸ್ಮರಿಸಿಕೊಂಡರು.
GEMS (Grass root Empowerment through Mahallu System) ಗುರಿಯನ್ನು ಪ್ರಸ್ತಾಪಿಸಿ ಅಬ್ದು ಸರ್ ಮಾತನಾಡಿ, “ಈ ಮೊಹಲ್ಲಾಗಳಲ್ಲಿ ಬಯಸುವ ಬದಲಾವಣೆಗಳು ಹೇಗಿರಬೇಕು?” ಎಂಬುದರ ಬಗ್ಗೆ ಮನಮುಟ್ಟುವ ರೀತಿಯಲ್ಲಿ ವಿಷಯ ಮಂಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು,
“ಖಾಝಿ ಎಂದರೆ ಕೇವಲ ಚಂದ್ರದರ್ಶನ ಅಥವಾ ನಿಕಾಹ್ ನಿರ್ವಹಿಸುವ ವ್ಯಕ್ತಿಯಲ್ಲ. ಸಮಾಜದ ಪ್ರತಿಯೊಂದು ವಿಷಯದಲ್ಲೂ ಖಾಝಿಗೆ ಜವಾಬ್ದಾರಿ ಇದೆ. ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಮಾಜವನ್ನು ಮುನ್ನಡೆಸುವಲ್ಲಿ ಖಾಝಿಗಳು ಪ್ರಮುಖ ಪಾತ್ರವಹಿಸಬೇಕು. ಅದಕ್ಕಾಗಿ ಖಾಝಿಗಳು ನಾಯಕತ್ವ ವಹಿಸುವ ಮೊಹಲ್ಲಾಗಳು ಮುಂದಾಗಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಪ್ವೆಲ್ ತಖ್ವಾ ಮಸೀದಿಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಸಂಯುಕ್ತ ಜಮಾಅತ್ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ