ಮಸ್ಕತ್ :- DKSC ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆ ದಿನಾಂಕ 30/05/2025 ರ ಶುಕ್ರವಾರ ಜುಮ್ಅ ನಮಾಝಿನ ನಂತರ ಗೋಲ್ಡನ್ ಓಯಸಿಸ್ ಹೋಟೆಲ್ ಸಭಾಂಗಣದಲ್ಲಿ ಓಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರ ಅಧ್ಯಕ್ಷತೆಯಲ್ಲಿ ನಡೆದು, ನೂತನ ಅಧ್ಯಕ್ಷರಾಗಿ ಅಲ್ತಾಫ್ ಬೋಳಾರ್ ರವರನ್ನು ಆಯ್ಕೆ ಮಾಡಲಾಯಿತು.
ಒಮಾನ್ ರಾಷ್ಟ್ರೀಯ ಸಮಿತಿಯ ಆರ್ಗನೈಝರ್ ಬಹು॥ ಫಾರೂಖ್ ಸಖಾಫಿ ಕಾಟಿಪಳ್ಳರವರು ದುಆ ನೆರವೇರಿಸಿದರು ಹಾಗೂ ಸಭಾ ಉದ್ಘಾಟನೆಯನ್ನು ಉಬೈದ್ ಸಖಾಫಿ ಯವರು ನಡೆಸಿದರು. ಕೇಂದ್ರ ಸಮಿತಿಯ ನಾಯಕರಾದ ಹಾತಿಮ್ ಕೂಳೂರು, ಕೆ.ಎಚ್. ರಫೀಖ್ ಸೂರಿಂಜೆ ರವರು ಅತಿಥಿ ಭಾಷಣ ಮಾಡಿದರು. ಅಬ್ದುಲ್ ಮಜೀದ್ ಕಣ್ಣಂಗಾರ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
DKSC ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಲಾ ಕಾಲೇಜ್ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಜ॥ ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರನ್ನು ಅದರ ಕಟ್ಟಡ ನಿರ್ಮಣ ಸಮಿತಿಯ ಚೆಯರ್ಮಾನ್ ಆಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಮಿತಿಯ ನಾಯಕರನ್ನು ಸಭೆಯಲ್ಲಿ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು,ಒಮಾನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಪಡುಬಿದ್ರಿ ವರದಿ ಮಂಡಿಸಿದರು. ಕೋಶಾಧಿಕಾರಿ ಆರಿಫ್ ಕೋಡಿ ಲೆಕ್ಕಪತ್ರ ಮಂಡಿಸಿದರು. ಅನ್ಸಾರ್ ಕಾಟಿಪಳ್ಳ ಗ್ಲೋಬಲ್ ವರದಿ ವಾಚಿಸಿದರು. ಶಿಹಾಬ್ ಮೊಯ್ದಿನ್ ಖಿರಾಅತ್ ಪಠಿಸಿದರು ನೂರ್ ಮುಹಮ್ಮದ್ ಪಡುಬಿದ್ರಿ ಸ್ವಾಗತಿಸಿ ಮೊಯ್ದಿನ್ ಸಾಸ್ತಾನ ಧನ್ಯವಾದಗೈದರು,ಅನ್ಸಾರ್ ಕಾಟಿಪಳ್ಳ ನಿರೂಪಿಸಿದರು.

2025 ರ ಸಾಲಿನ ನೂತನ ಸಮಿತಿ
ಲಾ ಕಾಲೇಜು ಕಟ್ಟಡ ನಿರ್ಮಾಣದ ಚೇರ್ಮಾನ್
ಮೋನಬ್ಬ ಹಾಜಿ ಅಬ್ದುಲ್ ರಹಮಾನ್ ಎರ್ಮಾಲ್
ಅಧ್ಯಕ್ಷ: ಅಲ್ತಾಫ್ ಬೋಲಾರ್
ಪ್ರ. ಕಾರ್ಯದರ್ಶಿ: ಯೂಸುಫ್ ಹೈದರ್
ಹಣಕಾಸು ಕಾರ್ಯದರ್ಶಿ:ನಿಯಾಝ್ ಮಂಗಳೂರು
ಡೆವಲಪ್ಮೆಂಟ್ ಚೇರ್ಮನ್: ಮುಹಿಯುದ್ದೀನ್ ಪಡುಬಿದ್ರಿ
ಸಂವಹನ ಕಾರ್ಯದರ್ಶಿ: ನೂರ್ ಮುಹಮ್ಮದ್ ಪಡುಬಿದ್ರಿ
ಉಪಾಧ್ಯಕ್ಷ: ಅನ್ಸಾರ್ ಕಾಟಿಪಳ್ಳ
ಕಾರ್ಯದರ್ಶಿ: ಮುಹಿಯುದ್ದೀನ್ ಸಾಸ್ತಾನ
ಮುಖ್ಯ ಸಲಹೆಗಾರ: ಶುಕೂರ್ ಖಾಜಿ
ಲೆಕ್ಕ ಪರಿಶೋಧಕರು: ಶಬೀರ್ ಕಾಟಿಪಳ್ಳ
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ