janadhvani

Kannada Online News Paper

‘ಉಸಿರಿಗಾಗಿ ಹಸಿರು’: ಎಸ್.ವೈ.ಎಸ್ ಮರಿಕ್ಕಳ ಯೂನಿಟ್ ನಿಂದ ಪರಿಸರ ದಿನಾಚರಣೆ

ಜೂನ್,5: ಪರಿಸರ ದಿನ ಪ್ರಯುಕ್ತ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆಯ “ಉಸಿರಿಗಾಗಿ ಹಸಿರು” ಎಂಬ ಘೋಷಣೆಯೊಂದಿಗೆ ನಡೆಸಲ್ಪಡುವ ಸಸಿ ನೆಡುವ ಕಾರ್ಯಕ್ರಮದ ಭಾಗವಾಗಿ ಎಸ್.ವೈ.ಎಸ್ ಮರಿಕ್ಕಳ ಯೂನಿಟ್ ವತಿಯಿಂದ ಮರಿಕ್ಕಳ ಜುಮಾ ಮಸ್ಜಿದ್ ಅಂಗಳದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮರಿಕ್ಕಳ ಮುದರ್ರಿಸ್ ಇರ್ಫಾನ್ ಸಖಾಫಿ ವೇಣೂರು, ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ,ಮದರಸ ಉಸ್ತಾದರುಗಳಾದ ಝೈನುಲ್ ಆಬಿದ್ ಸಖಾಫಿ, ಜಬ್ಬಾರ್ ಸಅದಿ, ಶಫೀಕ್ ಸಖಾಫಿ ಮೋಂಟುಗೋಳಿ, ಇಸ್ಮಾಯಿಲ್ ಫಾಳಿಲಿ ಕೊಂಡಂಗೇರಿ, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುರ್ರಹ್ಮಾನ್ ಲತೀಫಿ,ಎಸ್.ವೈ.ಎಸ್ ಮೋಂಟುಗೋಳಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಝರ್,ಮರಿಕ್ಕಳ ಯೂನಿಟ್ ಕೋಶಾಧಿಕಾರಿ ಮಜೀದ್ ಮಜಲ್,ಸದಸ್ಯರುಗಳಾದ ಫಾರೂಕ್ ಮದನಿ,Abraham ನಿಡ್ಮಾಡ್,ಹಾಗೂ ತಾಜುಲ್ ಫುಖಹಾಅ್ ದರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.