janadhvani

Kannada Online News Paper

ಕಾರ್ಯಕರ್ತರು ಅರ್ಪಣಾ ಮನೋಭಾವದಿಂದ ಕಾರ್ಯಾಚರಿಸಬೇಕು -ಅನಸ್ ಅಮಾನಿ

ಬೆಂಗಳೂರು – ಎಸ್.ಎಸ್.ಎಫ್ ಬೆಂಗಳೂರು ಜಿಲ್ಲಾ ಸಮಿತಿ ಆಯೋಜಿಸಿದ ತ್ರೈವ್ ಕ್ಯಾಂಪ್ ಜಿಲ್ಲಾಧ್ಯಕ್ಷರಾದ ಫಾರೂಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸೇವರಿ ಬ್ಯುಸಿನೆಸ್ ಹೋಟೆಲ್ ಮಡಿವಾಳದಲ್ಲಿ ನಡೆಯಿತು.

ಕೇರಳ ರಾಜ್ಯ ಎಸ್ಸೆಸ್ಸೆಫ್ ಕೋಶಾಧಿಕಾರಿ ಅನಸ್ ಅಮಾನಿ ಪುಷ್ಪಗಿರಿ “ಆಧುನಿಕತೆ ಮತ್ತು ಸಂಘಟನೆ” ಎಂಬ ವಿಷಯಯನ್ನು ಆಧರಿಸಿ ತರಗತಿಯನ್ನು ನಡೆಸಿಕೊಟ್ಟು, ಸಂಘಟನಾ ಕಾರ್ಯಾಚರಣೆಯಲ್ಲಿ ವೈಯಕ್ತಿಕತೆಯನ್ನು ಬಿಟ್ಟು ಅರ್ಪಣಾ ಮನೋಭಾವದಿಂದ ಕಾರ್ಯಾಚರಿಸುವುದರ ಮೂಲಕ ಸಮಾಜದಲ್ಲಿ ಒಳಿತನ್ನು ಪಸರಿಸುವಲ್ಲಿ ನಾವು ಮುಂದಾಳುಗಳಾಗಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಕಾರ್ಯಾಗಾರದಲ್ಲಿ ಬೆಂಗಳೂರು ಜಿಲ್ಲೆಯ 7 ಡಿವಿಷನ್ ಗಳಿಂದ ಆಯ್ದ ಸುಮಾರು 150 ಕ್ಕೂ ಹೆಚ್ಚು ಎಸ್ ಎಸ್ ಎಫ್ ಕಾರ್ಯಕರ್ತರು ಭಾಗವಹಿಸಿದ್ದರು. ತ್ರೈವ್ ಕ್ಯಾಂಪ್ ಛೇರ್ಮನ್ ವಾಜಿದ್ ಅಮ್ಜದಿ ಉಸ್ತಾದ್ ಸ್ವಾಗತಿಸಿ , ಜಿಲ್ಲಾಧ್ಯಕ್ಷರಾದ ಫಾರುಕ್ ಅಮಾನಿ ವಂದಿಸಿದರು .