ಗದಗ: ಇಲ್ಲಿನ ಲಕ್ಷ್ಮಿಶ್ವರ ದೂದ್ ನಾನಾ ದರ್ಗಾ ಶರೀಫಿನಲ್ಲಿ ಜೂನ್ ಹತ್ತರಂದು ಏಕದಿನ ಇಸ್ಲಾಮಿಕ್ ಕಾನ್ಫರೆನ್ಸ್ ಮಹಾ ಸಂಗಮ ನಡೆಯಲಿದ್ದು ರಾಷ್ಟ್ರಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಘಟಕ ಝೖನುಲ್ ಆಭಿದ್ ಲಕ್ಷ್ಮೀಶ್ವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂನ್ 10 ಬೆಳಿಗ್ಗೆ ಧ್ವಜಾರೋಹಣವನ್ನು ದರ್ಗಾ ಸಮಿತಿ ಅಧ್ಯಕ್ಷ ಸುಲೈಮಾನ್ ಕಣಕೆ ನೆರವೇರಿಸಲಿದ್ದಾರೆ.ನಂತರ ಸಂಘಟಕರಿಂದ ನಗರ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 4ಗಂಟೆಗೆ ಮಿನಾರ ಉದ್ಘಾಟನೆ ನಡೆಯಲಿದೆ.
ಬಳಿಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ.
ರಾತ್ರಿ 7 ಗಂಟೆಗೆ ಮಜ್ಲಿಸುನ್ನೂರ್ ವಾರ್ಷಿಕ, ಆಂಬ್ಯುಲೆನ್ಸ್ ಲೋಕಾರ್ಪಣೆ, ಡ್ರಗ್ಸ್ ಮುಕ್ತ ಅಭಿಯಾನ ಉದ್ಘಾಟನೆ ವಿವಿದ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಸಯ್ಯಿದ್ ಝೖನುಲ್ ಆಬಿದ್ ತಂಗಳ್ ದುಗ್ಗಲಡ್ಕ ನೇತೃತ್ವ ವಹಿಸಲಿದ್ದಾರೆ.