ಮಂಗಳೂರು: ಅತ್ತಾವರ ಅವತಾರ್ ಹೋಟೆಲಿನಲ್ಲಿ ಮೇ 13ರಂದು ಡ್ರಗ್ಸ್ ವಿಷಯದ ಕುರಿತು ಮುಸ್ಲಿಂ ಮುಖಂಡರಿಂದ ಚಿಂತನ ಮಂಥನ ಸಭೆ ನಡೆಯಿತು.
ಇಂದು ಡ್ರಗ್ಸ್ ಪ್ರಕರಣಗಳಲ್ಲಿ ಮುಸ್ಲಿಂ ಯುವಕರು ಬಲಿಯಾಗುತ್ತಿರುವ ವರದಿಗಳು ಹೆಚ್ಚಿತ್ತಿದ್ದಂತೆ ಎಚ್ಚತ್ತುಕೊಂಡ ಸಮುದಾಯದ ನಾಯಕರು ಇದರ ಪರಿಹಾರಕ್ಕೆ ಮುಂದೆ ಬಂದಿದ್ದಾರೆ.
ಈ ಕುರಿತು ಇಕ್ಬಾಲ್ ಬಾಳಿಲ ಅಧ್ಯಯನಾತ್ಮಕ ಪುಸ್ತಕ ರಚಿಸಿ ಜಾಗೃತಿ ಮೂಡಿಸಿದ್ದಾರೆ.
ನಂತರ ನಿವೃತ ಡಿ.ಸಿ.ಪಿ ಜಿ ಏ ಬಾವಾ, ವೈಟ್ ಸ್ಟೋನ್ ಶರೀಫ್ ಹಾಜಿ ಇದರ ಬಗ್ಗೆ ರಂಗಕ್ಕಿಳಿದಿದ್ದಾರೆ.
ಈ ಕುರಿತು ಸಮುದಾಯದ ನಾಯಕರನ್ನು ಸೇರಿಸಿ ಅಭಿಪ್ರಾಯ ಕೇಳಿ ಪರಿಹಾರ ಮಾರ್ಗದ ಬಗ್ಗೆ ಚಿಂತನ ಮಂತನ ಸಭೆ ನಡೆಸಲಾಯಿತು.
ಸ್ಪೀಕರ್ ಯು ಟಿ ಖಾದರ್ ಈ ಯೋಜನೆಗೆ ಚಾಲನೆ ನೀಡಿ ಸಂಪೂರ್ಣ ಸಹಕಾರದ ಬಗ್ಗೆ ಭರವಸೆ ನೀಡಿದರು. ಜಿ ಏ ಬಾವಾ ಉದ್ಘಾಟಿಸಿದರು, ಶರೀಫ್ ಹಾಜಿ ವೈಟ್ ಸ್ಟೋನ್ ಅಧ್ಯಕ್ಷತೆ ವಹಿಸಿದ್ದರು.
ಸಂಘಟಕರಾದ ಶೈಖ್ ಇರ್ಫಾನಿ, ಎಸ್ ಎಂ ಆರ್ ರಶೀದ್ ಹಾಜಿ ರಫೀಕ್ ಮಾಸ್ಟರ್, ಹೈದರ್ ಪೆರ್ತಿಪ್ಪಾಡಿ ಮಾತನಾಡಿದರು.
ಇಕ್ಬಾಲ್ ಬಾಳಿಲ ವಿಷಯ ಮಂಡಿಸಿದರು.
ಆಸೀಫ್ ಡೀಲ್ಸ್ ಸ್ವಾಗತಿಸಿದರು.