ಮಂಗಳೂರು: ಕೋಮು ಪ್ರಚೋದನಕಾರಿ ಭಾಷಣಗಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರಿಂದ ದೂರು ದಾಖಲಾಗಿದೆ.
ನಿನ್ನೆ ಉಳ್ಳಾಲ ಠಾಣೆಗೆ ಭೇಟಿ ನೀಡಿದ ಉಳ್ಳಾಲ ಕಾಂಗ್ರೆಸ್ ಮುಖಂಡರ ನಿಯೋಗವು ಇತ್ತೀಚೆಗೆ ಕುತ್ತಾರಿನಲ್ಲಿ ಕೋಮು ದ್ವೇಷ ಹರಡುವ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಸಿದ್ದು, ಇದರಂತೆ FIR ದಾಖಲಿಸಲಾಗಿದೆ.
ಬಿಟ್ಟಿ ಪ್ರಚಾರಕರೆಲ್ಲಿ..? ಕೋಮು ಭಾಷಣಗಾರನ ವಿರುದ್ಧ ದೂರು ದಾಖಲಿಸಲು ಕಾಂಗ್ರೇಸ್ಸೇ ಬೇಕಾಯಿತೇ..?
ಮೊನ್ನೆಯಿಂದ ಸೂಲಿಬೆಲೆ ಭಾಷಣದ ವಿರುದ್ಧ ಸಾಮಾಜಿಕ ಜಾಲಾತಾಣಗಳಲ್ಲಿ ಬರೋಬ್ಬರಿ ಬರಹ ಟೀಕೆ ಅದು, ಇದು ಅಂತ ಬೊಬ್ಬೆ ಹಾಕಿದವರು ಕೇವಲ ಸೋಶಿಯಲ್ ಮೀಡಿಯಾ ಪ್ರಚಾರಕರೆಂದು ಮತ್ತೆ ಸಾಬೀತುಪಡಿಸಿದರು. ಸಿಕ್ಕಿದಕ್ಕೆಲ್ಲಾ ಕಾಂಗ್ರೇಸನ್ನು ಟಾರ್ಗೆಟ್ ಮಾಡಿ ಅದರ ನಾಯಕರ ಬಗ್ಗೆ ತೋಚಿದ್ದನ್ನು ಗೀಚುವ ನಕಲಿ ಸಮುದಾಯ ಪ್ರೇಮಿಗಳ ವಾಸ್ತವತೆಯನ್ನು ಸಮಾಜ ಅರಿಯತೊಡಗಿದೆ.
ಮೊನ್ನೆಯಿಂದ ಇಷ್ಟೆಲ್ಲಾ ಬೊಬ್ಬೆ ಹಾಕಿ, ತೋಚಿದ್ದನ್ನು ಗೀಚಿ, ಕಾಂಗ್ರೆಸ್ ನಾಯಕರ ಮೇಲೆ ಟೀಕೆಯ ಸುರಿಮಳೆ ಹಾಕಿದ ಇವರು ಕನಿಷ್ಠ ಪಕ್ಷ ಪೊಲೀಸ್ ಠಾಣೆಗಾದರೂ ತೆರಳಿ ಒಂದು ಕೇಸು ಕೊಡಲು ಸಾಧ್ಯವಾಗಿಲ್ಲ ಎಂದಾದರೆ ಇವರು ಯಾವ ಸೀಮೆಯ ಸಮುದಾಯ ಪ್ರೇಮಿಗಳು? ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
ಈ ರೀತಿ ಮಾಧ್ಯಮದ ಮುಂದೆ ಬಂದು ಡೈಲಾಗ್ ಬಿಡುವುದನ್ನು, ಸೋಶಿಯಲ್ ಮೀಡಿಯಾದ ಬರಹವನ್ನು ನೋಡಿ, ಇವರೇ ಕೇಸು ಕೊಡಬಹುದೆಂದು ಉಳ್ಳಾಲದ ಕಾಂಗ್ರೆಸಿಗರು ಭಾವಿಸಿದ್ದರು. ಆದರೆ, ಜಾಣ್ಮೆಯ ಹೆಜ್ಜೆ ಹಾಕಿದ ಉಳ್ಳಾಲದ ನೈಜ್ಯ ಸಮುದಾಯ ಮುಖಂಡರು ಹಾಗೂ ಜಾತ್ಯಾತೀತ ನಿಲುವಿನ ನಾಯಕರು 4ದಿನ ಕಾದು ನಂತರ ಈ ಬಿಟ್ಟಿ ಪ್ರಚಾರಕರ ಸುದ್ದಿ ಇಲ್ಲವೆಂದು ಅರಿತು ಕೇಸು ದಾಖಲಿಸಿದ್ದಾರೆ.
ಸೂಲಿಬೆಲೆ ವಿರುದ್ಧ FIR ದಾಖಲಾಗಿದೆ. ಇದರೊಂದಿಗೆ ಉಳ್ಳಾಲದ ಕಾಂಗ್ರೇಸ್ ಮುಖಂಡರು ಅಭಿನಂದನೆಗೆ ಅರ್ಹರಾಗಿದ್ದಾರೆ.
ಸುಮಟೋ ಕೇಸ್..
ಕೆಳಗೆ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯಂತೆ ಕೇಸು ದಾಖಲಿಸಿದರೂ ಸುಮೋಟೋ ಸುಮೋಟೋ ಅಂತ ಹೇಳುವವರ ಗಮನಕ್ಕೆ.
ಇಲ್ಲಿ ಸುಮೋಟೋ ದಾಖಲಿಸಬೇಕಾದರೆ ಕಾನೂನು ಸಲಹೆ ಬೇಕು.
ಇನ್ನು ಸುಮೋಟೋ ಹಾಕಿದರೂ ಅದು ನಂತರ ಹೈಕೋರ್ಟ್, ಪೊಲೀಸರಿಗೆ ಚೀಮಾರಿ ಹಾಕುವಲ್ಲಿಗೆ ಬಂದು ತಲುಪುತ್ತದೆ.
ಈ ಹಿಂದೆ ಸುಮೋಟೋ ಕೇಸು ದಾಖಲಾದ ಹಲವು ಪ್ರಕರಣಗಳು ಇದಕ್ಕೆ ಸಾಕ್ಷಿ.
ಇಲ್ಲಿ ಪ್ರಮುಖವಾಗಿ ಸೂಲಿಬೆಲೆ ಯಾವ ಸಮುದಾಯದ ಹೆಸರನ್ನು ತೆಗೆಯಲಿಲ್ಲ. ಅದೆಲ್ಲವೂ ಸಮುದಾಯವನ್ನು ಕೆರಳಿಸಲು ಕೇಸು ದಾಖಲಾಗದ ಶೈಲಿಯಲ್ಲಿ ಬಂದು ಮಾತನಾಡಿ ಹೋಗುತ್ತಾರೆ.
ಭಾಷಣದ ಉದ್ದಕ್ಕೂ ತಂತ್ರ ಬಳಸಿಯೇ ಮಾತನಾಡುತ್ತಾನೆ. ಈ ನಿಟ್ಟಿನಲ್ಲಿ ತಾಳ್ಮೆ ವಹಿಸಿ ಕಾನೂನು ಸಲಹೆ ಪಡೆದು ಜಾಣ್ಮೆಯಿಂದ ಮುಂದುವರಿದರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಇದುವರೆಗೂ ಒಂದು ಕೇಸು ಕೊಡದ ಬಿಟ್ಟಿ ಪ್ರಚಾರಕರಿಗೆ ನಿನ್ನೆಯಿಂದ ಉಲ್ಟಾ ಸ್ಪಾನರ್ ಬಿದ್ದಿದೆ.
ಕಾಂಗ್ರೆಸಿನ ಜಾಣ್ಮೆಯ ನಡೆಗೆ ವ್ಯಾಪಕ ಪ್ರಶಂಸೆ ದೊರಕತೊಡಗಿವೆ.
ವರದಿ: ಇಕ್ಬಾಲ್ ಬಾಳಿಲ
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ