ಜಿದ್ದಾ: ಪವಿತ್ರ ಕಅಬಾದ ಹೊದಿಕೆಯಾದ ಕಿಸ್ವಾವನ್ನು ಜಿದ್ದಾದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಮಕ್ಕಾದ ಹೊರಗಿನ ನಗರದಲ್ಲಿ ಕಿಸ್ವಾ ಪ್ರದರ್ಶನಗೊಂಡಿರುವುದು ಇದೇ ಮೊದಲು. ಈ ಪ್ರದರ್ಶನವು ಸೌದಿ ಅರೇಬಿಯಾದ ಇಸ್ಲಾಮಿಕ್ ಆರ್ಟ್ಸ್ ಬಿನಾಲೆ 2025 ರಲ್ಲಿ ನಡೆಯಲಿದೆ.
ಈ ಪ್ರದರ್ಶನದ ಮೂಲಕ, ಸಂದರ್ಶಕರಿಗೆ ಮಕ್ಕಾದಲ್ಲಿರುವ ಪವಿತ್ರ ಕಅಬಾವನ್ನು ಅಲಂಕರಿಸುವ ಕಿಸ್ವಾದ ಸಂಕೀರ್ಣವಾದ ನೇಯ್ಗೆ ಮತ್ತು ಕಸೂತಿಯನ್ನು ಆನಂದಿಸಲು ಸಾಧ್ಯವಾಗಲಿದೆ. ದಿರಿಯಾ ಬೆನಾಲೆ ಫೌಂಡೇಶನ್ ಆಯೋಜಿಸಿರುವ ಇಸ್ಲಾಮಿಕ್ ಆರ್ಟ್ಸ್ ಬಿನಾಲೆಯು ಮೇ 25 ರವರೆಗೆ ನಡೆಯಲಿದೆ. ಇದು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪಶ್ಚಿಮ ಹಜ್ ಟರ್ಮಿನಲ್ನಲ್ಲಿ ನಡೆಯುತ್ತಿದೆ.
ಕಿಸ್ವಾವನ್ನು ಕಿಂಗ್ ಅಬ್ದುಲ್ ಅಝೀಝ್ ಸಂಕೀರ್ಣದಲ್ಲಿ ತಯಾರಿಸಲಾಗುತ್ತದೆ. ಪವಿತ್ರ ಕಅಬಾಗೆ ಅಲಂಕಾರಿಕ ಕಸೂತಿ ಉಡುಗೆಗಳನ್ನು 1927 ರಿಂದ ಇಲ್ಲಿ ಉತ್ಪಾದಿಸಲಾಗುತ್ತಿದೆ. ಕಿಸ್ವಾವನ್ನು 200 ಕ್ಕೂ ಹೆಚ್ಚು ಕುಶಲಕರ್ಮಿಗಳು ರೇಷ್ಮೆ, ಚಿನ್ನ ಮತ್ತು ಬೆಳ್ಳಿಯ ದಾರಗಳನ್ನು ಬಳಸಿ ತಯಾರಿಸುತ್ತಾರೆ. ಇದನ್ನು 1000 ಕಿಲೋಗ್ರಾಂಗಳಷ್ಟು ತೂಕದ ಕಪ್ಪು ಬಟ್ಟೆಯಿಂದ ನೇಯಲಾಗುತ್ತದೆ. ನೇಯ್ಗೆಗೆ ಸುಮಾರು 120 ಕಿಲೋಗ್ರಾಂಗಳಷ್ಟು ಚಿನ್ನದ ದಾರ ಮತ್ತು ಸುಮಾರು 100 ಕಿಲೋಗ್ರಾಂಗಳಷ್ಟು ಬೆಳ್ಳಿ ದಾರವನ್ನು ಬಳಸಲಾಗುತ್ತದೆ. ಪವಿತ್ರ ಕಅಬಾದ ಕಿಸ್ವಾ, ಅದರ ವಿಶಿಷ್ಟ ಲಿಖಿತ ಮತ್ತು ಅಲಂಕಾರಗಳೊಂದಿಗೆ, ಇಸ್ಲಾಮಿಕ್ ಕಲೆಯ ಅತ್ಯುನ್ನತ ಸೃಷ್ಟಿ ಎಂದು ಪರಿಗಣಿಸಲಾಗಿದೆ. ಇದನ್ನು ಪ್ರತಿ ವರ್ಷ ಬದಲಾಯಿಸಲಾಗುತ್ತದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ