ಜಿದ್ದಾ: ಸೌದಿ ಅರೇಬಿಯಾದಲ್ಲಿ ನೆಲೆಸಿರುವ ವಿದೇಶಿಗರು ಮತ್ತು ಸ್ಥಳೀಯರಿಗೆ ಹಜ್ಜ್ ಗೆ ನೋಂದಣಿ ಆರಂಭವಾಗಿದೆ. ವಿವಿಧ ದರಗಳ ಆರು ಪ್ಯಾಕೇಜ್‌ಗಳು 4,000 ರಿಯಾಲ್‌ಗಳಿಂದ ಪ್ರಾರಂಭವಾಗುತ್ತವೆ. ಸೌದಿ ಅರೇಬಿಯಾದಲ್ಲಿ ಇಕಾಮಾ ಹೊಂದಿರುವ ವಿದೇಶಿಯರಿಗೆ ಮತ್ತು ಅವರ ಕುಟುಂಬಗಳಿಗೆ ಹಜ್ ಮಾಡಲು ಅವಕಾಶವಿದೆ. ಈ ಹಿಂದೆ ಹಜ್ಜ್ ನಿರ್ವಹಿಸದವರಿಗೆ ಆದ್ಯತೆ.
ಕಡಿಮೆ ಹಜ್ ಪ್ಯಾಕೇಜ್ 3984 ರಿಯಾಲ್ ಆಗಿದೆ. ಇದಲ್ಲದೇ 4036, 8092, 10366, 13150 ಮತ್ತು 13733 ರಿಯಾಲ್‌ಗಳ ಐದು ಪ್ಯಾಕೇಜ್‌ಗಳಿವೆ. ಈ ದರವು ವ್ಯಾಟ್ ಅನ್ನು ಒಳಗೊಂಡಿದೆ. ಕಡಿಮೆ ದರದ ಮೊದಲ ಎರಡು ಪ್ಯಾಕೇಜ್‌ಗಳು ಮೀನಾದಲ್ಲಿ ಟೆಂಟ್ ಸೌಲಭ್ಯವನ್ನು ಹೊಂದಿರುವುದಿಲ್ಲ. ಅರಫಾ ಮತ್ತು ಮುಝ್ದಲಿಫಾ ಪ್ರಯಾಣ ಮತ್ತು ವಸತಿ ಲಭ್ಯವಿದೆ. ಎಂಟು ಸಾವಿರ ಮತ್ತು ಹತ್ತು ಸಾವಿರ ರಿಯಾಲ್ ಪ್ಯಾಕೇಜ್‌ಗಳಲ್ಲಿ ಮಿನಾ ಮತ್ತು ಅರಫಾದಲ್ಲಿ ಎಲ್ಲಾ ಸೌಲಭ್ಯಗಳೊದಿಗೆ ಟೆಂಟ್, ಆಹಾರ ಮತ್ತು ಪ್ರಯಾಣ ಸೌಲಭ್ಯ ದೊರೆಯಲಿದೆ.
13150 ರಿಯಾಲ್‌ಗಳ ಪ್ಯಾಕೇಜ್‌ನಲ್ಲಿ, ಜಮ್ರದ ಪಕ್ಕದ ಆರು ಮಿನಾ ಟವರ್‌ಗಳಲ್ಲಿ ವಸತಿ ಸೌಲಭ್ಯ. 13733 ರಿಯಾಲ್‌ಗಳ ಅತ್ಯುನ್ನತ ಪ್ಯಾಕೇಜ್ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುತ್ತದೆ. ಇವರಿಗೆ ಮಿನಾದಲ್ಲಿ ಜಮ್ರದ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಲಾದ ಕಿದಾನಾ ಕಟ್ಟಡದಲ್ಲಿ ತಂಗುವ ವ್ಯವಸ್ಥೆ. ಅರಫಾದಲ್ಲೂ ಹೆಚ್ಚು ಅನುಕೂಲಕರ ಸೌಲಭ್ಯಗಳನ್ನು ಹೊಂದಿರುತ್ತದೆ. ಹಜ್ಜ್ ಮಾಡದವರಿಗೆ ಈ ಬಾರಿಯೂ ಆದ್ಯತೆ ನೀಡಲಾಗಿದೆ. ಆದರೆ ಮಹ್ರಮ್ ವಿಭಾಗಕ್ಕೆ ಇದು ಅನ್ವಯಿಸುವುದಿಲ್ಲ. ಒಬ್ಬ ಯಾತ್ರಿಕನು 14 ವ್ಯಕ್ತಿಗಳನ್ನು ಒಟ್ಟಿಗೆ ಸಹಚರರಾಗಿ ನೋಂದಾಯಿಸಿಕೊಳ್ಳಬಹುದು.ಹೀಗೆ ಮಾಡುವವರು ಅದೇ ವರ್ಗವನ್ನು ಮತ್ತು ಅದೇ ಹಜ್ ಮತ್ತು ಉಮ್ರಾ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಬೇಕು. ಯಾತ್ರಿಕರು ಆರೋಗ್ಯವಂತರಾಗಿರಬೇಕು ಮತ್ತು ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಿರಬೇಕು ಎಂಬ ನಿಬಂಧನೆ ಇದೆ.
Nusuk ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ localhaj.haj.gov.sa ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. ಪ್ರತಿ ಮೊಬೈಲ್ ಸಂಖ್ಯೆಗೆ ಒಂದು ನೋಂದಣಿಯನ್ನು ಮಾತ್ರ ಅನುಮತಿಸಲಾಗಿದೆ. ನೋಂದಣಿ ಸಮಯದಲ್ಲಿ ಒದಗಿಸಲಾದ ಮೊಬೈಲ್ ಸಂಖ್ಯೆಗೆ ಪ್ಯಾಕೇಜ್ ಶುಲ್ಕ ಪಾವತಿ ಅಧಿಸೂಚನೆಯನ್ನು ಕಳಿಸಲಾಗುತ್ತದೆ. ಈ ಸಂದೇಶದ ಪ್ರಕಾರ, ಹಣವನ್ನು ಮೊತ್ತವಾಗಿ ಅಥವಾ ಕಂತುಗಳಲ್ಲಿ ಪಾವತಿಸಬಹುದು.
ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ, ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. ಪೂರ್ಣ ಪಾವತಿಯ ನಂತರ, ಹಜ್ ಪರ್ಮಿಟ್ ಅನ್ನು QR ಕೋಡ್‌ನೊಂದಿಗೆ ಅಬ್ಶಿರ್‌ನಿಂದ ಮುದ್ರಿಸಬಹುದು. ಇದನ್ನು ಯಾತ್ರಿಕನು ಹಜ್ಜ್ ಉದ್ದಕ್ಕೂ ತನ್ನೊಂದಿಗೆ ಇಟ್ಟುಕೊಳ್ಳಬೇಕು.