ದಮ್ಮಾಮ್ : ಕಾಟಿಪಳ್ಳ ಮುಸ್ಲಿಂ ಯೂತ್ ಎಸೋಸಿಯೇಷನ್ (ಕೆಎಂವೈಎ) ಈಷ್ಟರ್ನ್ ಝೋನ್, ಸೌದಿ ಅರೇಬಿಯಾ ಇದರ 36 ನೇ ವಾರ್ಷಿಕ ಮಹಾಸಭೆ 07, ಫೆಬ್ರವರಿ 2025 ಶುಕ್ರವಾರ ಉಮ್ಮು ಸ್ವಾಹಿಖ್ ನಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಮುಸ್ತಫಾ ಇಬ್ರಾಹೀಂ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ರವರ ದುಆ ದ ಬಳಿಕ ಅಹ್ಮದ್ ತಖಿಯುದ್ದೀನ್ ಖಿರಾಅತ್ ಪಠಿಸಿದರು. ಶರ್ ವಾನ್ ಇಬ್ನ್ ಮುಹ್ಯಿದ್ದೀನ್ ಸ್ವಾಗತಿಸಿದರು.
ತದನಂತರ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ಆಯತ್ ಹದೀಸ್ ಗಳ ಅಡಿಸ್ಥಾನದಲ್ಲಿ ನಸೀಹತ್ ನೀಡಿದ ಬಳಿಕ ವಾರ್ಷಿಕ ವರದಿ ವಾಚಿಸಿದರು ಹಾಗೂ ಕೋಶಾಧಿಕಾರಿ ಪಿ.ಎಂ. ತಾಜುದ್ದೀನ್ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಅನಮೋದನೆಯನ್ನು ಪಡೆದರು.
ಮ್ಯಾನ್ ಆಫ್ ದಿ ಇಯರ್ ಅವಾರ್ಡ್ 2024 ನ್ನು NAKEEZ UBAIDULLAH ( ROOF TECH JUBAIL) ರವರಿಗೆ ನೀಡಲಾಯಿತು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮುಸ್ಥಫ ಇಬ್ರಾಹೀಂ ಮಾತನಾಡಿ ಕೆಎಂವೈಎ ಗಾಗಿ ದುಡಿದವರಿಗೆ ಕ್ರತಙ್ಞತೆ ಯನ್ನು ಅರ್ಪಿಸಿ ಮುಂದಕ್ಕೂ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ನಮ್ಮೊಂದಿಗಿರಲಿ ಎಂದು ಭಿನ್ನವಿಸಿದರು.
ಅವರಿಗೆ Presidential Award 2024 ನೀಡಿ ಗೌರವಿಸಲಾಯಿತು.
2025-26 ನೇ ಸಾಲಿಗೆ ನೂತನ ಸಮಿತಿಯನ್ನು ಕೆಎಂವೈಎ ದಮಾಮ್ ಘಟಕದ ಮಾಜಿ ಅಧ್ಯಕ್ಷ ಜನಾಬ್ ಪಿ.ಎ.ರಹ್ಮಾನ್ ರವರು ಚುನಾವಣಾಧಿಕಾರಿಯಾಗಿ ಆರಿಸಿದರು.
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮುಸ್ಥಫ ಆರಗ, ಗೌರವಾಧ್ಯಕ್ಷರಾಗಿ ಮುಸ್ಥಫ ಇಬ್ರಾಹೀಂ, ಕೋಶಾಧಿಕಾರಿಯಾಗಿ ಪಿ.ಎಂ. ತಾಜುದ್ದೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಕಾಟಿಪಳ್ಳ ರವರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಇಜಾಝ್ ಇಸ್ಮಾಯೀಲ್, ನಕೀಝ್ ರೂಫ್ ಟೆಕ್, ಮತ್ತು ಸ್ವಾದಿಖ್ ಸಿವೈಸಿ, ಜೊತೆ ಕಾರ್ಯದರ್ಶಿಗಳಾಗಿ ತೌಸೀಫ್ ಪಿ.ಇ. , ಮುನಾಝ್ ಮುಹಮ್ಮದ್ ಮತ್ತು ಅಬ್ದುರ್ರಹ್ಮಾನ್ ನೌಫಲ್ , ಉಪಕೋಶಾಧಿಕಾರಿಯಾಗಿ ಶಬೀರ್ ಪಿ.ಎ. ಆಯ್ಕೆಗೊಂಡರು. ಸಂಘಟನಾ ಕಾರ್ಯದರ್ಶಿ ಯಾಗಿ ಶಕೀಲ್ ಆದಂ, ಆಡಿಟರ್ ಆಗಿ ಅಬ್ದುಲ್ ಗಫ್ಫಾರ್, ಮೀಡಿಯಾ ವಿಭಾಗಕ್ಕೆ ಶಾಫಿ ಇಮ್ರಾನ್ (ಮುನ್ನ), ಸಲಹಾ ಸಮಿತಿಗೆ ಪಿ.ಎ.ರಹ್ಮಾನ್,ಪಿ.ಎ.ಮುಹಮ್ಮದ್ ಬಶೀರ್, ನೌಶಾದ್ ರಶೀದ್ ಹಾಗೂ ನಝೀರ್ ಗುಲಾಂ, ಸಂಘಟಕರಾಗಿ ಅಹ್ಮದ್ ಸ್ವಾದಿಖ್, ಸೈಫುಲ್ಲ ಮುಹ್ಯಿದ್ದೀನ್, ಸೈಫುಲ್ಲ ಪಿ.ಇ., ಅಹ್ಮದ್ ಶುಹೈಬ್, ಆರಿಫ್ ಪಿ.ಎಂ. ಮತ್ತು 20 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಪವಿತ್ರ ಉಮ್ರಾ ನಿರ್ವಹಿಸಲು ಊರಿನಿಂದ ಆಗಮಿಸಿದ ಅಬ್ದುರ್ರಹೀಂ ಕಾಟಿಪಳ್ಳ ಇಬ್ನ್ ಅಹ್ಮದ್ ಬಾವ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಪವಿತ್ರ ಖುರ್ ಆನ್ ಗ್ರಂಥ ವನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಕೆಎಂವೈಎ ರಿಯಾದ್ ಘಟಕದ ಚೆಯರ್ಮ್ಯಾನ್ ಸುಲೈಮಾನ್ ಶರೀಫ್ ಆಗಮಿಸಿದ್ದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮುಹಮ್ಮದ್ ಮುಸ್ಥಫಾ ಆರಗ ರವರು ಮಾತನಾಡುತ್ತಾ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರವಿದ್ದರೆ ಮಾತ್ರ ಕೆಎಂವೈಎ ಅಭಿವ್ರಧ್ಧಿ ಹೊಂದಲು ಸಾಧ್ಯ. ಅದರ ಯಶಸ್ವಿಗೆ ನಮ್ಮೊಂದಿಗೆ ಕೈ ಜೋಡಿಸಿರಿ ಎಂದು
ಭಿನ್ನವಿಸಿದರು.ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಣೆ ಗೈದು ಸಮಾರಂಭದ ಕೊನೆಯಲ್ಲಿ ಧನ್ಯವಾದ ಗೈದರು.
All the best! ALLAH BLESS TO ALL
iSMAIL KATIPALLA, DAMMAM KSA