janadhvani

Kannada Online News Paper

ಇದೇ ಮೊದಲ ಬಾರಿಗೆ ಮಕ್ಕಾದ ಹೊರಗೆ ‘ಕಿಸ್ವಾ’ ಪ್ರದರ್ಶನ

ದಿರಿಯಾ ಬೆನಾಲೆ ಫೌಂಡೇಶನ್ ಆಯೋಜಿಸಿರುವ ಇಸ್ಲಾಮಿಕ್ ಆರ್ಟ್ಸ್ ಬಿನಾಲೆಯು ಮೇ 25 ರವರೆಗೆ ನಡೆಯಲಿದೆ.

ಜಿದ್ದಾ: ಪವಿತ್ರ ಕಅಬಾದ ಹೊದಿಕೆಯಾದ ಕಿಸ್ವಾವನ್ನು ಜಿದ್ದಾದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಮಕ್ಕಾದ ಹೊರಗಿನ ನಗರದಲ್ಲಿ ಕಿಸ್ವಾ ಪ್ರದರ್ಶನಗೊಂಡಿರುವುದು ಇದೇ ಮೊದಲು. ಈ ಪ್ರದರ್ಶನವು ಸೌದಿ ಅರೇಬಿಯಾದ ಇಸ್ಲಾಮಿಕ್ ಆರ್ಟ್ಸ್ ಬಿನಾಲೆ 2025 ರಲ್ಲಿ ನಡೆಯಲಿದೆ.

ಈ ಪ್ರದರ್ಶನದ ಮೂಲಕ, ಸಂದರ್ಶಕರಿಗೆ ಮಕ್ಕಾದಲ್ಲಿರುವ ಪವಿತ್ರ ಕಅಬಾವನ್ನು ಅಲಂಕರಿಸುವ ಕಿಸ್ವಾದ ಸಂಕೀರ್ಣವಾದ ನೇಯ್ಗೆ ಮತ್ತು ಕಸೂತಿಯನ್ನು ಆನಂದಿಸಲು ಸಾಧ್ಯವಾಗಲಿದೆ. ದಿರಿಯಾ ಬೆನಾಲೆ ಫೌಂಡೇಶನ್ ಆಯೋಜಿಸಿರುವ ಇಸ್ಲಾಮಿಕ್ ಆರ್ಟ್ಸ್ ಬಿನಾಲೆಯು ಮೇ 25 ರವರೆಗೆ ನಡೆಯಲಿದೆ. ಇದು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪಶ್ಚಿಮ ಹಜ್ ಟರ್ಮಿನಲ್‌ನಲ್ಲಿ ನಡೆಯುತ್ತಿದೆ.

ಕಿಸ್ವಾವನ್ನು ಕಿಂಗ್ ಅಬ್ದುಲ್ ಅಝೀಝ್ ಸಂಕೀರ್ಣದಲ್ಲಿ ತಯಾರಿಸಲಾಗುತ್ತದೆ. ಪವಿತ್ರ ಕಅಬಾಗೆ ಅಲಂಕಾರಿಕ ಕಸೂತಿ ಉಡುಗೆಗಳನ್ನು 1927 ರಿಂದ ಇಲ್ಲಿ ಉತ್ಪಾದಿಸಲಾಗುತ್ತಿದೆ. ಕಿಸ್ವಾವನ್ನು 200 ಕ್ಕೂ ಹೆಚ್ಚು ಕುಶಲಕರ್ಮಿಗಳು ರೇಷ್ಮೆ, ಚಿನ್ನ ಮತ್ತು ಬೆಳ್ಳಿಯ ದಾರಗಳನ್ನು ಬಳಸಿ ತಯಾರಿಸುತ್ತಾರೆ. ಇದನ್ನು 1000 ಕಿಲೋಗ್ರಾಂಗಳಷ್ಟು ತೂಕದ ಕಪ್ಪು ಬಟ್ಟೆಯಿಂದ ನೇಯಲಾಗುತ್ತದೆ. ನೇಯ್ಗೆಗೆ ಸುಮಾರು 120 ಕಿಲೋಗ್ರಾಂಗಳಷ್ಟು ಚಿನ್ನದ ದಾರ ಮತ್ತು ಸುಮಾರು 100 ಕಿಲೋಗ್ರಾಂಗಳಷ್ಟು ಬೆಳ್ಳಿ ದಾರವನ್ನು ಬಳಸಲಾಗುತ್ತದೆ. ಪವಿತ್ರ ಕಅಬಾದ ಕಿಸ್ವಾ, ಅದರ ವಿಶಿಷ್ಟ ಲಿಖಿತ ಮತ್ತು ಅಲಂಕಾರಗಳೊಂದಿಗೆ, ಇಸ್ಲಾಮಿಕ್ ಕಲೆಯ ಅತ್ಯುನ್ನತ ಸೃಷ್ಟಿ ಎಂದು ಪರಿಗಣಿಸಲಾಗಿದೆ. ಇದನ್ನು ಪ್ರತಿ ವರ್ಷ ಬದಲಾಯಿಸಲಾಗುತ್ತದೆ.