ಮನಾಮ: ಬಹರೈನ್ ಸುನ್ನೀ ಕನ್ನಡಿಗರ ಆವೇಶ ಕೆ.ಸಿ.ಎಫ್, ವರ್ಷಂಪ್ರತಿ ನಡೆಸುವ ಬೃಹತ್ ಇಫ್ತಾರ್ ಸಂಗಮವು ದಿನಾಂಕ 1-6-2018ರಂದು ಸಂಜೆ 5 ಗಂಟೆಗೆ ಬಹರೈನ್ ಮನಾಮದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಇದು ಕೇವಲ ಇಫ್ತಾರ್ ಕಾರ್ಯಕ್ರಮ ಮಾತ್ರವಾಗಿರದೆ, ಬಹರೈನಿನ ಅಷ್ಟ ದಿಕ್ಕುಗಳಿಂದಲೂ ಆಗಮಿಸಿದ ಅನಿವಾಸಿ ಕನ್ನಡಿಗರ ಸಂಗಮವೂ ಆಗಿತ್ತು.
ಕೆಸಿಎಫ್ ಬಹರೈನ್ ನ ಬೃಹತ್ ಇಫ್ತಾರ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣವನ್ನು ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರೂ, ಕರ್ನಾಟಕ ಎಸ್. ವೈ.ಎಸ್ ಪ್ರಧಾನ ಕಾರ್ಯದರ್ಶಿ, ಭಾಷಣ ರತ್ನ ಎಂ.ಎಸ್.ಎಂ ಝೈನಿ ಕಾಮಿಲ್ ಸಖಾಫಿ ಉಸ್ತಾದರು ನೆರವೇರಿಸಿದರು. ವಿಶೇಷ ಅತಿಥಿಯಾಗಿ ಪ್ಯಾಲೆಸ್ತೀನ್ ರಾಯಭಾರಿ ಸನ್ಮಾನ್ಯ ತ್ವಾಹ ಎಂ.ಅಬ್ದುಲ್ ಖಾದರ್ ಹಾಗೂ ಎನ್ಆರ್ ಐಕೆ ಬಹರೈನ್ ಇದರ ಚೇರ್ಮನ್ ಲೀಲಾಧರ್ ಬೈಕಂಪಾಡಿ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕನ್ನಡ ಸಂಘ ಬಹರೈನ್ ಮಾಜಿ ಅಧ್ಯಕ್ಷರಾದ ರಾಜ್ ಕುಮಾರ್,ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಮೆಟೆಲ್ಕೊ ರಝಾಕ್ ಹಾಜಿ ,ರಶೀದ್ ರೆಮಿ ಅಲ್ಲದೆ ಹಲವಾರು ಉಲಮಾಗಳು, ಸಾಮಾಜಿಕ ನೇತಾರರು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಕೆ.ಸಿ.ಎಫ್ ಐಎನ್ಸಿ, ರಾಷ್ಟ್ರೀಯ, ಝೋನಲ್ ಹಾಗೂ ಸೆಕ್ಟರ್ ನೇತಾರರೂ ಹಾಗೂ ಕಾರ್ಯಕರ್ತ ರರು ಬಾಗವಿಸಿದ್ದರು.ಅಲ್ಲದೆ ಬಹರೈನ್ ವಿವಿಧ ಅನಿವಾಸಿ ಸಂಘಟನೆಗಳ ನೇತಾರರು, ಸದಸ್ಯರು ಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಮಜೀದ್ ಸಅದಿ ಉಸ್ತಾದರವರ ದುಃಅ ನೆರವೇರಿಸಿ,ಕೆಸಿಎಫ್ ರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಚೇರ್ಮನ್ ಬಶೀರ್ ಕಾರ್ಲೆ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತವನ್ನು ಕೋರಿ, ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮ ವನ್ನು ಅಝ್ಹರ್ ತಂಙಳ್ ರವರ ದುಃಅ ಮತ್ತು ಬುರ್ದಾ ಆಲಾಪನೆಯೊಂದಿಗೆ ಕೊನೆಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ