ಮನಾಮ: ಬಹರೈನ್ ಸುನ್ನೀ ಕನ್ನಡಿಗರ ಆವೇಶ ಕೆ.ಸಿ.ಎಫ್, ವರ್ಷಂಪ್ರತಿ ನಡೆಸುವ ಬೃಹತ್ ಇಫ್ತಾರ್ ಸಂಗಮವು ದಿನಾಂಕ 1-6-2018ರಂದು ಸಂಜೆ 5 ಗಂಟೆಗೆ ಬಹರೈನ್ ಮನಾಮದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಇದು ಕೇವಲ ಇಫ್ತಾರ್ ಕಾರ್ಯಕ್ರಮ ಮಾತ್ರವಾಗಿರದೆ, ಬಹರೈನಿನ ಅಷ್ಟ ದಿಕ್ಕುಗಳಿಂದಲೂ ಆಗಮಿಸಿದ ಅನಿವಾಸಿ ಕನ್ನಡಿಗರ ಸಂಗಮವೂ ಆಗಿತ್ತು.
ಈ ಕಾರ್ಯಕ್ರಮಕ್ಕೆ ಕೆ.ಸಿ.ಎಫ್ ಐಎನ್ಸಿ, ರಾಷ್ಟ್ರೀಯ, ಝೋನಲ್ ಹಾಗೂ ಸೆಕ್ಟರ್ ನೇತಾರರೂ ಹಾಗೂ ಕಾರ್ಯಕರ್ತ ರರು ಬಾಗವಿಸಿದ್ದರು.ಅಲ್ಲದೆ ಬಹರೈನ್ ವಿವಿಧ ಅನಿವಾಸಿ ಸಂಘಟನೆಗಳ ನೇತಾರರು, ಸದಸ್ಯರು ಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಮಜೀದ್ ಸಅದಿ ಉಸ್ತಾದರವರ ದುಃಅ ನೆರವೇರಿಸಿ,ಕೆಸಿಎಫ್ ರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಚೇರ್ಮನ್ ಬಶೀರ್ ಕಾರ್ಲೆ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತವನ್ನು ಕೋರಿ, ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮ ವನ್ನು ಅಝ್ಹರ್ ತಂಙಳ್ ರವರ ದುಃಅ ಮತ್ತು ಬುರ್ದಾ ಆಲಾಪನೆಯೊಂದಿಗೆ ಕೊನೆಗೊಳಿಸಲಾಯಿತು.