ಕೊಚ್ಚಿ | ಮಲಯಾಳಿಗಳು ಸಹಿತವಿರುವವರನ್ನು ವಿದೇಶಕ್ಕೆ ಕರೆದೊಯ್ದು ಕಿಡ್ನಿ ಮಾರಾಟ ಮಾಫಿಯಾಗೆ ಒಪ್ಪಿಸುವ ಗ್ಯಾಂಗ್ನ ನಾಯಕನನ್ನು ಬಂಧಿಸಲಾಗಿದೆ. ತ್ರಿಶೂರ್ ವಲಪಾಡ್ ಮೂಲದ ಸಾಬಿತ್ ನಾಸರ್ ನನ್ನು ಕೇರಳದ ನೆಡುಂಬಾಸ್ಸೇರಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಈತ ಅಂತಾರಾಷ್ಟ್ರೀಯ ಮಾಫಿಯಾದ ಭಾಗವಾಗಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಹಿಂದೆ ಆತನ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿತ್ತು. ಕೇಂದ್ರ ಗುಪ್ತಚರ ವರದಿಯ ಪ್ರಕಾರ ಅವನನ್ನು ಬಂಧಿಸಲಾಗಿದೆ.
ಈ ಗ್ಯಾಂಗ್ ಸಂತ್ರಸ್ತರನ್ನು ನಂಬಿಸಿ ಮೋಸ ಮಾಡಿ ವಿದೇಶಕ್ಕೆ ಕಳ್ಳಸಾಗಣೆ ಮಾಡಿ ಕಿಡ್ನಿ ವ್ಯಾಪಾರ ಮಾಡುತ್ತಿತ್ತು. ಕಿಡ್ನಿ ನೀಡಿದಾತನಿಗೆ ಅಲ್ಪ ಮೊತ್ತವನ್ನು ಪಾವತಿಸಿದ ನಂತರ ಹೆಚ್ಚಿನ ಬೆಲೆಗೆ ಮೂತ್ರಪಿಂಡಗಳನ್ನು ಮಾರಾಟ ಮಾಡುವುದಾಗಿದೆ ರೂಢಿ. ಈತ ಕಿಡ್ನಿ ದಂಧೆಗಾಗಿ ಹಲವು ಮಂದಿಯನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಿರುವುದಾಗಿ ವರದಿಯಾಗಿದೆ.
ಮೊದಲು ನೆಡುಂಬಸ್ಸೆರಿಯಿಂದ ಕುವೈತ್ಗೆ ಮತ್ತು ಅಲ್ಲಿಂದ ಇರಾನ್ಗೆ ಜನರನ್ನು ಕರೆದೊಯ್ಯಲಾಗುತ್ತಿತ್ತು. ಈ ರೀತಿ ಜನರನ್ನು ಕರೆದೊಯ್ದು ವಾಪಸಾಗುತ್ತಿದ್ದ ವೇಳೆ ಸಾಬಿತ್ ನಾಸರ್ ಎಂಬಾತನನ್ನು ಬಂದಿಸಲಾಗಿದೆ. ಈತನ ವಿರುದ್ಧ ಅಂಗಾಂಗ ಸಾಗಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಂಗಾಂಗ ಸಾಗಣೆ ಮಾಫಿಯಾದೊಂದಿಗೆ ಇನ್ನಷ್ಟು ಮಂದಿ ಸಂಪರ್ಕ ಹೊಂದಿದ್ದಾರೆಂದು ಈತನ ವಿಚಾರಣೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಸಿಕ್ಕಿಬೀಳಲಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಗೂ ತನಿಖೆ ವಿಸ್ತರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ಸಿದ್ಧವಾಗಿಲ್ಲ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ