ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ರಾಜ್ಯ ಮಟ್ಟದ ಮಹಾ ಸಮ್ಮೇಳನದ ಪ್ರಚಾರಾರ್ಥ ಆಕ್ಷನ್-24 ಕಾರ್ಯಕ್ರಮವು ಪಾಣೆಮಂಗಳೂರು ಎಸ್ ಎಸ್ ಆಡಿಟೋರಿಯಂ ನಲ್ಲಿ ನಡೆಯಿತು.
ಎಸ್ ವೈ ಎಸ್ ಪ್ರಚಾರ ಸಮಿತಿಯ ಚೇರ್ ಮಾನ್ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದರು. ಸಮಿತಿಯ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಮುನ್ನುಡಿಯಾಗಿ ವಿಷಯ ಮಂಡಿಸಿದರು. ಎಸ್ ವೈ ಎಸ್ ರಾಜ್ಯ ನಾಯಕ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಮುಖ್ಯಭಾಷಣ ಮಾಡಿದರು.
ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಖತರ್, ಅಬ್ದುಲ್ ಲತೀಫ್ ಮಾಸ್ಟರ್ ಮಾತನಾಡಿದರು.
,ಎಸ್ ವೈ ಎಸ್ ನಾಯಕರಾದ ಬಶೀರ್ ಮದನಿ ಅಲ್ ಕಾಮಿಲಿ, ಹಂಝ ಮದನಿ ತೆಂಕಕಾರಂದೂರು, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಖಾಲಿದ್ ಹಾಜಿ ಭಟ್ಕಳ, ನವಾಜ್ ಸಖಾಫಿ ಅಡ್ಯಾರ್, ಸಲೀಂ ಕನ್ಯಾಡಿ, ಬಶೀರ್ ಸಖಾಫಿ ಉಳ್ಳಾಲ, ಮಜೀದ್ ಸಖಾಫಿ ಅಮ್ಮುಂಜೆ, ರಝಾಕ್ ಭಾರತ್, ಎಸ್ಸೆಸ್ಸೆಫ್ ನಾಯಕರಾದ ಮುಹಮ್ಮದ್ ಮಿಸ್ಬಾಹಿ ಮರ್ದಾಳ, ಇರ್ಷಾದ್ ಹಾಜಿ ಗೂಡನಬಳಿ ರಶೀದ್ ಹಾಜಿ ವಗ್ಗ ಮುಂತಾದವರು ಭಾಗವಹಿಸಿದರು.
ದ. ಕ ಜಿಲ್ಲಾ ವ್ಯಾಪ್ತಿಯ ಹದಿಮೂರು ಝೋನ್ ಗಳ ಪ್ರಚಾರ ಸಮಿತಿಯನ್ನು ರಚಿಸಲಾಯಿತು. ಜನವರಿ 13ರಿಂದ 17ರ ವರೆಗೆ ಸರ್ಕಲ್ ಪ್ರಯಾಣ ಸಂದೇಶ ಜಾಥಾ ನಡೆಸಲು ತೀರ್ಮಾನಿಸಲಾಯಿತು.
ಪ್ರಚಾರ ಸಮಿತಿಯ ಮಹಬೂಬ್ ಸಖಾಫಿ ಸ್ವಾಗತಿಸಿ ಸಲೀಂ ಕನ್ಯಾಡಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ