ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಮಟ್ಟದ ಸಾಹಿತ್ಯೋತ್ಸವವು ಕಾವು ಬದ್ರಿಯಾ ಎಜು ಸೆಂಟರ್ ನಲ್ಲಿ ನಡೆಯಿತು. ನೂತನ ಮಾಡಾವು ಸೆಕ್ಟರ್ 965 ಅಂಕಗಳೊಂದಿಗೆ ಚಾಂಪಿಯನ್, ಮಾಣಿ ಸೆಕ್ಟರ್ 948 ಅಂಕಗಳೊಂದಿಗೆ ರನ್ನರ್ ತಮ್ಮದಾಗಿಸಿಕೊಂಡಿತು.

ಕ್ರಮವಾಗಿ ಈಶ್ವರಮಂಗಲ 905 , ಕಬಕ 784, ಕುಂಬ್ರ 777, ರೆಂಜ 747 ಹಾಗೂ ಪುತ್ತೂರು ಸೆಕ್ಟರ್ 698 ಅಂಕಗಳೊಂದಿಗೆ ಉತ್ತಮ ಪೈಪೋಟಿಯನ್ನು ನೀಡಿತು. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಜನರಲ್ ಹಾಗೂ ಕ್ಯಾಂಪಸ್ ವಿಭಾಗಗಳಲ್ಲಿ 118 ರಷ್ಟು ಸ್ಪರ್ಧೆಯು 4 ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆಯಿತು. ಡಿವಿಷನ್ ವ್ಯಾಪ್ತಿಯ 7 ಸೆಕ್ಟರ್ ಗಳಿಂದ ಆಯ್ಕೆಯಾದಂತಹ ಸುಮಾರು 450 ರಷ್ಷು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ರೂವಾರಿ ಸಯ್ಯದ್ ಹದ್ದಾದ್ ತಂಙಳ್ ದುಆ ನೆರವೇರಿಸಿ ತಮ್ಮ ಬಾಲ್ಯ ಕಾಲದ ಸಾಹಿತ್ಯೋತ್ಸವ ವೇದಿಕೆಯನ್ನು ನೆನಪಿಸುತ್ತಾ ಮಕ್ಕಳಿಗೆ ಹುರಿದುಂಬಿಸಿ ಫಲಿತಾಂಶ ವನ್ನು ಪ್ರಕಟಿಸಿದರು.
ಬೆಳಿಗ್ಗೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಜಿಲ್ಲಾ, ಝೋನ್ , ಸರ್ಕಲ್, ಬ್ರಾಂಚ್ ಗಳ ನಾಯಕರು , ಎಸ್ಸೆಸ್ಸೆಫ್ ಜಿಲ್ಲಾ ನಾಯಕರು , ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಿ ಶುಭಹಾರೈಸಿದರು. ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ಜನವರಿ 6, 7 ರಂದು ಉಪ್ಪಿನಂಗಡಿ, ಸರಳಿಕಟ್ಟೆಯಲ್ಲಿ ನಡೆಯುವ ದ.ಕ ಈಸ್ಟ್ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರತಿನಿಧಿಸಲಿದ್ದಾರೆ. ಚಾಂಪಿಯನ್ ಹಾಗೂ ರನ್ನರ್ ಟ್ರೋಫಿಯನ್ನು ಸಯ್ಯದ್ ಹದ್ದಾದ್ ತಂಙಳ್ ರವರಿಂದ ಸೆಕ್ಟರ್ ನಾಯಕರು ಸ್ವೀಕರಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ