ಮಲಪ್ಪುರಂ| ಮರುನಾಡನ್ ಮಲಯಾಳಿ ಆನ್‌ಲೈನ್ ಚಾನೆಲ್ ಮಾಲೀಕ ಶಾಜನ್ ಸ್ಕಾರಿಯಾ ಅವರನ್ನು ಬಂಧಿಸಲಾಗಿದೆ. ತ್ರಿಕಾಕ್ಕಕರ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಬಂಧನವಾಗಿದೆ. ತ್ರಿಕಾಕ್ಕರ ಪೊಲೀಸರು ನಿಲಂಬೂರ್ ತಲುಪಿ ಬಂಧನವನ್ನು ದಾಖಲಿಸಿದ್ದಾರೆ.
ಇಂದು ನಿಲಂಬೂರ್ ಎಸ್‌ಎಚ್‌ಒ ಮುಂದೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿತ್ತು. ಹಾಜರಾಗದಿದ್ದರೆ ನಿರೀಕ್ಷಣಾ ಜಾಮೀನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಇದರಂತೆ, ಸ್ಕಾರಿಯಾ ಮಲಪ್ಪುರಂ ನಿಲಂಬೂರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಧಾರ್ಮಿಕ ದ್ವೇಷದ ಪ್ರಕರಣದಲ್ಲಿ ಅವರು ವಿಚಾರಣೆಗೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ ಠಾಣೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಇದಾದ ಕೂಡಲೇ ತ್ರಿಕಾಕ್ಕರ ಪೊಲೀಸರು ಶಾಜನನ್ನು ಬಂಧಿಸಿದ್ದಾರೆ.
ಬಿಎಸ್‌ಎನ್‌ಎಲ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ದೆಹಲಿ ಮೂಲದ ಮಲಯಾಳಿ ರಾಧಾಕೃಷ್ಣನ್ ನೀಡಿದ ದೂರಿನ ಆಧಾರದ ಮೇಲೆ ತ್ರಿಕಾಕ್ಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಜನ್ ಸ್ಕಾರಿಯಾ ಪೊಲೀಸರ ವೈರ್‌ಲೆಸ್ ಸಂದೇಶಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪಿವಿ ಅನ್ವರ್ ಅವರು ಡಿಜಿಪಿಗೆ ದೂರು ಸಲ್ಲಿಸಿದ್ದರು. ಇದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ವಿಚಾರ ಎಂದು ಅನ್ವರ್ ಇ-ಮೇಲ್ ಮೂಲಕ ಪ್ರಧಾನಿಗೂ ದೂರು ನೀಡಿದ್ದರು. ಶಾಜನ್ ಮಹಾರಾಷ್ಟ್ರದ ವ್ಯವಸ್ಥೆಯನ್ನು ವೈರ್‌ಲೆಸ್ ಸಂದೇಶಗಳ ಸೋರಿಕೆಗೆ ಬಳಸುತ್ತಿದ್ದರು ಎಂದು ಅನ್ವರ್ ಆರೋಪಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
‘ಈದುಲ್ ಫಿತ್ರ್’ ಖುತ್ಬಾ ವೇಳೆ ಇಮಾಮ್ ಕುಸಿದು ಬಿದ್ದು ಮೃತ್ಯು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ಬಿಗ್ ಬಾಸ್ ನ ಒಳಗೇನು? ತನಿಖೆಗೆ ಆದೇಶಿಸಿದ ಹೈಕೋರ್ಟ್
ರಹೀಮ್ ವಿಮೋಚನಾ ಅಭಿಯಾನ: ಮೊಬೈಲ್ ಆಪ್ ಸಿದ್ಧಪಡಿಸಿದವರರು ಇವರು
ರಿಯಾಜ್ ಮೌಲವಿ ಹತ್ಯೆ ಪ್ರಕರಣದ ನ್ಯಾಯಾಧೀಶರ ವರ್ಗಾವಣೆಗೆ ಕೆಟಿ ಜಲೀಲ್ ಟೀಕೆ
ರಿಯಾಜ್ ಮೌಲ್ವಿ ಹತ್ಯೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ವರ್ಗಾವಣೆ
ತಾಂತ್ರಿಕ ವಿವಿಗಳಲ್ಲಿ ಸರ್ಚ್ ಸಮಿತಿ ರಚನೆ ಗೆ ಮುಂದಾದ ಕೇರಳ ಸರಕಾರ- ವಿವಿ ಕುಲಾಧಿಪತಿ ರಾಜ್ಯಪಾಲರಿಗೆ ಸಡ್ಡು
ರಿಯಾಝ್ ಮೌಲವಿ ಹತ್ಯೆ: ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ಮತ್ತು ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ
ರಿಯಾಝ್ ಮೌಲವಿ ಹತ್ಯೆ: ಅನಿರೀಕ್ಷಿತ ತೀರ್ಪು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳಲಿದೆ- ಎಸ್ವೈಎಸ್
ಕಾಸರಗೋಡು: ರಿಯಾಝ್ ಮೌಲವಿ ಹತ್ಯೆ ಪ್ರಕರಣ- ಆರ್ಎಸ್ಎಸ್ ಕಾರ್ಯಕರ್ತರಾದ ಆರೋಪಿಗಳು ಖುಲಾಸೆ