janadhvani

Kannada Online News Paper

ಮರುನಾಡನ್ ಮಲಯಾಳಿ ಆನ್‌ಲೈನ್ ಚಾನೆಲ್ ಮಾಲೀಕ ಶಾಜನ್ ಸ್ಕಾರಿಯಾ ಬಂಧನ

ಧಾರ್ಮಿಕ ದ್ವೇಷದ ಪ್ರಕರಣದಲ್ಲಿ ಅವರು ನಿಲಂಬೂರ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು

ಮಲಪ್ಪುರಂ| ಮರುನಾಡನ್ ಮಲಯಾಳಿ ಆನ್‌ಲೈನ್ ಚಾನೆಲ್ ಮಾಲೀಕ ಶಾಜನ್ ಸ್ಕಾರಿಯಾ ಅವರನ್ನು ಬಂಧಿಸಲಾಗಿದೆ. ತ್ರಿಕಾಕ್ಕಕರ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಬಂಧನವಾಗಿದೆ. ತ್ರಿಕಾಕ್ಕರ ಪೊಲೀಸರು ನಿಲಂಬೂರ್ ತಲುಪಿ ಬಂಧನವನ್ನು ದಾಖಲಿಸಿದ್ದಾರೆ.

ಇಂದು ನಿಲಂಬೂರ್ ಎಸ್‌ಎಚ್‌ಒ ಮುಂದೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿತ್ತು. ಹಾಜರಾಗದಿದ್ದರೆ ನಿರೀಕ್ಷಣಾ ಜಾಮೀನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಇದರಂತೆ, ಸ್ಕಾರಿಯಾ ಮಲಪ್ಪುರಂ ನಿಲಂಬೂರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಧಾರ್ಮಿಕ ದ್ವೇಷದ ಪ್ರಕರಣದಲ್ಲಿ ಅವರು ವಿಚಾರಣೆಗೆ ಹಾಜರಾಗಿದ್ದರು.

ಈ ಪ್ರಕರಣದಲ್ಲಿ ಠಾಣೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಇದಾದ ಕೂಡಲೇ ತ್ರಿಕಾಕ್ಕರ ಪೊಲೀಸರು ಶಾಜನನ್ನು ಬಂಧಿಸಿದ್ದಾರೆ.

ಬಿಎಸ್‌ಎನ್‌ಎಲ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ದೆಹಲಿ ಮೂಲದ ಮಲಯಾಳಿ ರಾಧಾಕೃಷ್ಣನ್ ನೀಡಿದ ದೂರಿನ ಆಧಾರದ ಮೇಲೆ ತ್ರಿಕಾಕ್ಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಜನ್ ಸ್ಕಾರಿಯಾ ಪೊಲೀಸರ ವೈರ್‌ಲೆಸ್ ಸಂದೇಶಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪಿವಿ ಅನ್ವರ್ ಅವರು ಡಿಜಿಪಿಗೆ ದೂರು ಸಲ್ಲಿಸಿದ್ದರು. ಇದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ವಿಚಾರ ಎಂದು ಅನ್ವರ್ ಇ-ಮೇಲ್ ಮೂಲಕ ಪ್ರಧಾನಿಗೂ ದೂರು ನೀಡಿದ್ದರು. ಶಾಜನ್ ಮಹಾರಾಷ್ಟ್ರದ ವ್ಯವಸ್ಥೆಯನ್ನು ವೈರ್‌ಲೆಸ್ ಸಂದೇಶಗಳ ಸೋರಿಕೆಗೆ ಬಳಸುತ್ತಿದ್ದರು ಎಂದು ಅನ್ವರ್ ಆರೋಪಿಸಿದ್ದಾರೆ.

error: Content is protected !! Not allowed copy content from janadhvani.com