ರಿಯಾದ್: ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ “ಸೌದಿಯಾ”(Saudia Airlines) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ವಿಮಾನ ಟಿಕೆಟ್ ಖರೀದಿಸುವ ಮೂಲಕ ದೇಶವನ್ನು ಪ್ರವೇಶಿಸಲು ಉಚಿತ ಪ್ರವಾಸಿ ವೀಸಾ(Free Tourist Visa) ವನ್ನು ಒದಗಿಸುವುದಾಗಿ ಬಹಿರಂಗಪಡಿಸಿದೆ.
ವಿಮಾನಯಾನದ ಟಿಕೆಟ್ ಖರೀದಿಸುವಾಗ,ಪ್ರವಾಸೋದ್ಯಮಕ್ಕಾಗಿ ದೇಶವನ್ನು ಪ್ರವೇಶಿಸಲು ಟೂರಿಸ್ಟ್ ವೀಸಾವನ್ನು ಉಚಿತವಾಗಿ ನೀಡುವ ಸೇವೆಯೊಂದನ್ನು ಸೌದಿ ಏರ್ಲೈನ್ಸ್ ಮುಂದಿನ ಕೆಲವೇ ದಿನಗಳಲ್ಲಿ ಪ್ರಾರಂಭಿಸಲಿದೆ ಎಂದು ಏರ್‌ಲೈನ್‌ನ ವಕ್ತಾರ ಅಬ್ದುಲ್ಲಾ ಅಲ್ ಶಹರಾನಿ ತಿಳಿಸಿದ್ದಾರೆ.
‘ನಿಮ್ಮ ಟಿಕೆಟ್ ವೀಸಾ ಆಗಿರುತ್ತದೆ’ಎಂಬ ಶೀರ್ಷಿಕೆಯ ಈ ಯೋಜನೆಯಡಿ ಸೌದಿ ಆರೇಬಿಯಾಕ್ಕೆ ಪ್ರಯಾಣಿಸುವವರಿಗೆ 96 ತಾಸುಗಳ ಕಾಲ (ನಾಲ್ಕು ದಿನಗಳು) ಸೌದಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಪ್ರವಾಸೋದ್ಯಮ ಹಾಗೂ ಉಮ್ರಾದ ಉದ್ದೇಶಗಳಿಗಾಗಿ ದೇಶಕ್ಕೆ ಆಗಮಿಸುವವರಿಗೆ ನೂತನ ಸೇವೆ ಲಭ್ಯವಾಗಲಿದೆ.
ಸೌದಿ ಏರ್ಲೈನ್ಸ್ ನ ನೂತನ ಪ್ರವಾಸಿ ವೀಸಾ ವ್ಯವಸ್ಥೆಯಡಿ ಪ್ರಯಾಣಿಕರು ಟಿಕೆಟ್ ಬುಕಿಂಗ್ ಜೊತೆಗೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಟಿಕೆಟನ್ನು ಖರೀದಿಸುವಾಗ ವೀಸಾ ಅಗತ್ಯವಿದೆಯೇ ಎಂದು ವಿಚಾರಿಸಲಾಗುತ್ತದೆ. ಅಗತ್ಯವಿದೆಯೆಂದು ಉತ್ತರಿಸಿದರೆ ಮೂರು ನಿಮಿಷಗಳೊಳಗೆ ಪ್ರವಾಸಿ ವೀಸಾ ಲಭಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲದೆ ವೀಸಾವನ್ನು ಪಡೆಯಲು ಸೌದಿ ಆರೇಬಿಯಾದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ ಅನ್ನು ಸಂದರ್ಶಿಸುವ ಅಗತ್ಯವೂ ಇರುವುದಿಲ್ಲ.
ಉಮ್ರಾ ನಿರ್ವಹಣೆಗೆ ಮುಸ್ಲಿಮರ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂತನ ಪ್ರವಾಸಿ ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಲು ತನಗೆ ಪ್ರೇರೇಪಣೆ ದೊರೆತಿದೆ ಎಂದು ಅಬ್ದುಲ್ಲಾ ಅಲ್ ಶಹರಾನಿ ಹೇಳಿದರು.
ಸೌದಿ ವಿಷನ್ 2030 ಗೆ ಅನುಗುಣವಾಗಿ ತಮ್ಮ ಟಿಕೆಟ್‌ಗಳನ್ನು ಖರೀದಿಸಲು ಸೌದಿಯಾ ಪ್ರಯಾಣಿಕರಿಗೆ ಪ್ರವಾಸಿ ವೀಸಾವನ್ನು ಪಡೆಯಲು ಅನುವು ಮಾಡಿಕೊಡಲು ಕ್ಯಾರಿಯರ್‌ನ ಡಿಜಿಟಲ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸಲು ಅವರು ಒತ್ತು ನೀಡಿದರು.
ಈ ಪ್ರವಾಸಿ ವೀಸಾದಲ್ಲಿ ದೇಶಕ್ಕೆ ಆಗಮಿಸುವವರಿಗೆ ದೇಶದ ಯಾವುದೇ ಕಡೆಗಳಿಗೆ ತೆರಳಬಹುದು, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು ಪ್ರತ್ಯೇಕವಾಗಿ, ಉಮ್ರಾ ಮತ್ತು ಮದೀನಾ ಝಿಯಾರತ್ ಕೈಗೊಳ್ಳಲು ಈ ವೀಸಾ ಅನುವು ಮಾಡಿಕೊಡುತ್ತದೆ ಎಂದು ಅಲ್ ಶಹರಾನಿ ಹೇಳಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ