ಮಂಗಳೂರು: “ಈ ದೇಶದ ಮುಸ್ಲಿಮರು ವಾಕ್ಚಾತುರ್ಯ ಮಾಡ ಕೂಡದು, ಅವರಿಗೆ ಭಾರತದಲ್ಲಿ ಭಯ ಬೇಡ, ಇಲ್ಲಿನ ನಿರ್ಧಿಷ್ಟ ಸಮುದಾಯವೊಂದು ಸಾವಿರಾರು ವರ್ಷದಿಂದ ಕಲಹದಿಂದ ಬದುಕುತ್ತಿದೆ” ಎಂಬಿತ್ಯಾದಿ ಮೋಹನ್ ಭಾಗವತ್(Mohan Bhagwat) ರ ಅಸಂಬದ್ಧ ಹೇಳಿಕೆಗೆ ಮುಸ್ಲಿಮ್ ಒಕ್ಕೂಟದ ಅಧ್ಯಕರಾದ ಕೆ.ಅಶ್ರಫ್(K.Ashraf) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂತಹಾ ಹೇಳಿಕೆ ನೀಡಿ ಇಲ್ಲಿನ ಮುಸ್ಲಿಮೇತರನ್ನು ಖುಷಿ ಪಡಿಸಲು, ಮುಸ್ಲಿಮರ ಬಗ್ಗೆ ಕಾಳಜಿ ವಹಿಸುವುದರಲ್ಲಿ ಅರ್ಥವಿಲ್ಲ. ಭಾಗವತರ ಹೇಳಿಕೆ ಒಂದರ್ಥದಲ್ಲಿ ಖಂಡನೀಯ, ಮುಸ್ಲಿಮರ ಪ್ರತಿಕ್ರಿಯೆ ಅಪೇಕ್ಷಿಸಿಯೇ ಹೇಳಿಕೆ ನೀಡುವ ಭಾಗವತರ ಸಮುದಾಯ ಈ ದೇಶಕ್ಕಾಗಿ ಮಾಡಿದ್ದಾದರೂ ಏನು ಎಂಬುದನ್ನಾದರೂ ಬಹಿರಂಗ ಪಡಿಸಬೇಕಿತ್ತು ಎಂದು ಅಶ್ರಫ್ ಆಗ್ರಹಿಸಿದರು.
ಮುಸ್ಲಿಮರು ಈ ದೇಶಕ್ಕಾಗಿ ಮಾಡಿದ ತ್ಯಾಗ, ಸೇವೆ ಮತ್ತು ಕೊಡುಗೆಗಳ ಪಟ್ಟಿಯು ಈ ಮಣ್ಣಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದನ್ನು ವಿವರಿಸುವ ಅಗತ್ಯ ಈ ಸಂಧರ್ಭದಲ್ಲಿ ಬರಲಾರದು.ಆದರೆ, ಭಾಗವತರು ಈ ದೇಶದ ಮುಸ್ಲಿಮರ ಬಗ್ಗೆ ಕಾಳಜಿ ವಹಿಸುವ ಬದಲು ವೈದಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಮತ್ತು ತಮ್ಮ ಕಾಳಜಿಯಲ್ಲಿ ಮುಸ್ಲಿಮರನ್ನು ಸೇರ್ಪಡೆ ಗೊಳಿಸುವ ಅಗತ್ಯವೂ ಇಲ್ಲ.
ಈ ದೇಶದ ಮುಸ್ಲಿಮರು ಯಾರದೊ ಹಂಗಿನಲ್ಲಿ ಈ ದೇಶದಲ್ಲಿ ಬದುಕುತ್ತಿಲ್ಲ, ಬದಲಾಗಿ ಮುಸ್ಲಿಮರು ಈ ದೇಶದಲ್ಲಿ ಅವರದ್ದೇ ಆದ ಸಂಸ್ಕೃತಿ, ಸುಶಿಕ್ಷಣ ಮತ್ತು ಸಂಪ್ರದಾಯದಂತೆ ಬದುಕಿ ಈ ಮಣ್ಣಿನೊಂದಿಗೆ ಲೀನವಾಗುವ ಸರ್ವ ಹಕ್ಕನ್ನು ಹೊಂದಿದ್ದಾರೆ. ಅದಕ್ಕೆ ಯಾರದೋ ಶಿಫಾರಸಿನ ಅಗತ್ಯವೂ ಇಲ್ಲ. ಇವೆಲ್ಲದರ ಕೊರತೆ ಬಹುಷಃ ಒಂದು ನಿರ್ಧಿಷ್ಟ ಸಮುದಾಯಕ್ಕೆ ಇರಲೂ ಬಹುದು, ಆ ಬಗ್ಗೆ ಭಾಗವತರು ಕಾಳಜಿ ವಹಿಸುವುದು ಈ ಸಂದರ್ಭದ ಅನಿವಾರ್ಯತೆ ಕೂಡಾ ಹೌದು ಎಂಬುದನ್ನು ಅರಿಯಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್