ತಾಯಿಫ್: ಸಮಸ್ತ ಇಸ್ಲಾಮಿಕ್ ಸೆಂಟರ್ SIC ಕರ್ನಾಟಕ ತಾಯಿಫ್ ಸಮಿತಿ ಇದರ ವತಿಯಿಂದ ಪ್ರಾರ್ಥನಾ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ SIC ಕಛೇರಿ ತಾಯಿಫ್ ನಲ್ಲಿ ನಡೆಯಿತು.
SIC ರಿಯಾದ್ ಸಮಿತಿ ಅಧ್ಯಕ್ಷರಾದ ಬಹು: ಆರಿಫ್ ಬಾಖವಿ ಉಸ್ತಾದರ ನೇತೃತ್ವದಲ್ಲಿ,ಯಾಸೀನ್ ಪಾರಾಯಣ, ತಹ್ಲೀಲ್ ಹಾಗೂ
ನಮ್ಮಿಂದ ಅಗಲಿದ ಮರಿಯಮ್ಮ ಕುದ್ಲೂರು (SIC ಕರ್ನಾಟಕ ತಾಯಿಫ್ ಸಮಿತಿ ಉಪಾಧ್ಯಕ್ಷರಾದ ಅನಸ್ ಕುದ್ಲೂರು ರವರ ಪಿತ್ರ್ ಸಹೋದರಿ ), ಅಬೂಬಕರ್ ಹಾಜಿ ಕೊಡಂಗಾಯಿ (ಎಸ್ ಕೆ ಎಸ್ ಎಸ್ ಎಫ್ ಕೊಡಂಗಾಯಿ ಶಾಖೆಯ ಮಾಜಿ ಅದ್ಯಕ್ಷರಾದ ಅಝರುದ್ದೀನ್ ಕೊಡಂಗಾಯಿ ರವರ ತಂದೆ) ಸೇರಿದಂತೆ ಇತ್ತೀಚಿಗೆ ನಮ್ಮಿಂದಗಲಿದ ಸಹೋದರ, ಸಹೋದರಿಯರ ಹೆಸರಿನಲ್ಲಿ ಮಯ್ಯತ್ ನಮಾಝ್ ನಿರ್ವಹಿಸಲಾಯಿತು.
ಕರ್ನಾಟಕ ರಾಜ್ಯ ಎಸ್,ಕೆ,ಎಸ್,ಎಸ್,ಎಫ್ ಪ್ರದಾನ ಕಾರ್ಯದರ್ಶಿ ಬಹು: ಅನೀಸ್ ಕೌಸರಿ ಉಸ್ತಾದರಿಗೆ SIC ಕರ್ನಾಟಕ ತಾಯಿಫ್ ಸಮಿತಿ ಅಧ್ಯಕ್ಷರಾದ ಹುಸೈನ್ ದಾರಿಮಿ ಮತ್ತು ಉಪಾಧ್ಯಕ್ಷರಾದ ಅನಸ್ ಕುದ್ಲೂರು ರವರು ಶಾಲು ಹೊದಿಸಿ ಸನ್ಮಾನಿಸಿದರು.
SIC ಕರ್ನಾಟಕ ರಿಯಾದ್ ಸಮಿತಿ ಅಧ್ಯಕ್ಷರಾದ ಬಹು: ಆರಿಫ್ ಬಾಖವಿ ಉಸ್ತಾದರಿಗೆ ಅಬ್ದುಲ್ ಕಾದರ್ ಜಾಲ್ಸೂರ್ ಹಾಗೂ ಲತೀಫ್ ಪಲ್ಲಕುಡಲ್ ರವರು ಶಾಲು ಹೊದಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದ ಎಸ್,ಕೆ,ಎಸ್,ಎಸ್,ಎಫ್ ಕರ್ನಾಟ ರಾಜ್ಯ ಪ್ರದಾನ ಕಾರ್ಯದರ್ಶಿ ಬಹು ಅನೀಸ್ ಕೌಸರಿ ಸಂಘಟನೆಯ ಜವಾಬ್ದಾರಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.ವೇದಿಕೆಯಲ್ಲಿ SIC ಕರ್ನಾಟಕ ತಾಯಿಫ್ ಸಮಿತಿ ಅಧ್ಯಕ್ಷ ರಾದ ಹುಸೈನ್ ದಾರಿಮಿ,SIC ದಾಯಿ ಶಾಫಿ ದಾರಿಮಿ,SIC TAIF ಕೇಂದ್ರ ಸಮಿತಿಯ
ಹಾಗೂ SIC ಕರ್ನಾಟಕ ಸಮಿತಿಯ ನೇತಾರರು ಹಾಜರಿದ್ದರು.
ಕಾರ್ಯಕ್ರಮವನ್ನು SIC ಕರ್ನಾಟಕ ತಾಯಿಫ್ ಸಮಿತಿ ಪ್ರದಾನ ಕಾರ್ಯದರ್ಶಿ ಟಿ.ಎಂ ಹಸೈನಾರ್ ಕೊಡಂಗಾಯಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
___________________
ವರದಿ: ಅಬೂ ಅಯಾನ್ ಕೊಡಂಗಾಯಿ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು