janadhvani

Kannada Online News Paper

ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಮಂದಿಗೆ ಅನುಮತಿಯಿಲ್ಲ- ಕಠಿಣ ತಪಾಸಣೆ

‘ನಿಮ್ಮ ಮನೆ, ನಿಮ್ಮ ಜವಾಬ್ದಾರಿ’ ಎಂಬ ಅಭಿಯಾನವನ್ನೂ ಆರಂಭಿಸಲಾಗಿದೆ.

ಅಬುಧಾಬಿ: ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ನಿವಾಸಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಮುಂದಿನ ವರ್ಷ ವ್ಯಾಪಕ ತಪಾಸಣೆ ಆರಂಭಿಸಲಾಗುವುದು. ನಿಯಮ ಉಲ್ಲಂಘಿಸುವವರಿಗೆ ಮಿಲಿಯನ್ ದಿರ್ಹಮ್ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬುಧಾಬಿ ಪುರಸಭೆ ಮತ್ತು ಸಾರಿಗೆ ಇಲಾಖೆ The Department of Municipalities and Transport (DMT) ಅಪಾರ್ಟ್‌ಮೆಂಟ್‌ಗಳಿಗೆ ಎಚ್ಚರಿಕೆ ನೀಡಿದೆ. ‘ನಿಮ್ಮ ಮನೆ, ನಿಮ್ಮ ಜವಾಬ್ದಾರಿ’ ಎಂಬ ಅಭಿಯಾನವನ್ನೂ ಆರಂಭಿಸಲಾಗಿದೆ. (launched the ‘Your home, your responsibility’awareness campaign)

ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳನ್ನು ಪರಿಶೀಲಿಸಲಾಗುವುದು. ಉಲ್ಲಂಘಿಸುವವರು ದೊಡ್ಡ ದಂಡವನ್ನು ಪಾವತಿಸಬೇಕಾಗುತ್ತದೆ.

ಕೆಲವು ಅಪಾರ್ಟ್‌ಮೆಂಟ್‌ಗಳು ಮತ್ತು ಕೊಠಡಿಗಳಲ್ಲಿ ಮಿತಿಮೀರಿದ ಜನಸಂದಣಿಯು ಭದ್ರತೆಗೆ ಬೆದರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಠಡಿಗಳನ್ನು ಬಾಡಿಗೆಗೆ ಪಡೆದವರು ಕಾನೂನುಬಾಹಿರವಾಗಿ ಇತರರಿಗೆ ನೀಡಲು ಅನುಮತಿಸುವುದಿಲ್ಲ.

ಈ ಅಭಿಯಾನವು ಅಬುಧಾಬಿ ನಾಗರಿಕ ರಕ್ಷಣಾ ಇಲಾಖೆಯ (the Abu Dhabi Civil Defense Authority) ಸಹಯೋಗದೊಂದಿಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಜನರನ್ನು ಬಿಡಬೇಡಿ ಎಂದು ಅಧಿಕಾರಿಗಳು ನಿವಾಸಿಗಳು ಮತ್ತು ರಿಯಲ್ ಎಸ್ಟೇಟ್ ಮಾಲೀಕರಿಗೆ ಸೂಚಿಸಿದ್ದಾರೆ. ಅಬುಧಾಬಿಯ ವಿವಿಧ ಪುರಸಭೆಗಳ ಅಡಿಯಲ್ಲಿ ತಪಾಸಣೆ ಅಭಿಯಾನವನ್ನು ನಡೆಸಲಾಗುತ್ತದೆ.

error: Content is protected !! Not allowed copy content from janadhvani.com