ಮಳಲಿ ಮಸೀದಿ ಸಂಬಂದಪಟ್ಟ 3 ನೇ ನ್ಯಾಯಲಯವು ಒಂದು ಅರ್ಜಿ ವಜಾ ಗೊಳಿಸಿದ್ದು ಅದೂ ಕೂಡಾ ವಖಫ್ ಕಾಯ್ದೆ ಸೆ 85 ಪ್ರಕಾರ ವಕ್ಫ್ ಆಸ್ತಿಯ ಎಲ್ಲಾ ಪ್ರಕರಣಗಳು ವಕ್ಫ್ ಟ್ರಿಬಿನಲಲ್ಲಿ ಇತ್ಯರ್ಥಗೊಳ್ಲುತ್ತದೆ. ಯಾವುದೇ ನ್ಯಾಯಾಲಗಳಿಗೆ ವಕ್ಪ್ ಸಂಬಂಧಪಟ್ಟ ಪ್ರಕರಣ ನಡೆಸಲು ವ್ಯಾಪ್ತಿ ನಿಷೇದಿಸಲಾಗಿದೆ ಎಂಬ ಕಾನೂನು ಇದ್ದರೂ ಅರ್ಜಿಯನ್ನು ಸಿವಿಲ್ 3 ನೇ ನ್ಯಾಯಲಾಯದ ನ್ಯಾಯಾಧೀಶರು ಪರಿಗಣಿಸದೆ ತೀರ್ಪು ನೀಡಿದ್ದಾರೆ. ಈ ಬಗ್ಗೆ ವಕ್ಫ್ ನ್ಯಾಯಾಲಯ ಶಾಕೆಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿಯು ಪತ್ರಿಕಾಗೋಷ್ಠಿ ನಡೆಸಿದೆ.
ಇಲ್ಲಿ ಯಾರ ವಿರುದ್ದ ಜಯ- ಪರಾಜಯ ಎಂದು ಬಿಂಬಿಸುವ ಅಗತ್ಯವಿಲ್ಲ. 500 ವರ್ಷಗಳಿಂದ ಇತಿಹಾಸವಿರುವ 1967 ರ ದಾಖಲೆಗಳಿರುವ 2003 ರಿಂದ ವಕ್ಫ್ ರಿಜಿಸ್ಟರ್ ಆದ ಮಳಲಿ ಮಸೀದಿ ಏನೆಂದು ಎಲ್ಲರಿಗೂ ತಿಳಿದ ವಿಚಾರ .ಕೆಲವು ರಾಜಕೀಯ ಲಾಭದ ಪತ್ರಿಕಾಗೋಷ್ಠಿಯ ಅಸಂಭದ್ದ ಹೇಳಿಕೆಗಳಿಗೆ ಯಾರೂ ತಲೆಕೆಡಿಸಬೇಕಾಗಿಲ್ಲ. ಎಲ್ಲರೂ ಶಾಂತಿಯಿಂದ ಸೌಹಾರ್ದತೆಯಿಂದ ಬಾಳೋಣ ಸತ್ಯಕ್ಕೆ ಯಾವಾಗಲೂ ಜಯ ಇದ್ದೇ ಇದೆ.
✍️ ಅಶ್ರಫ್ ಕಿನಾರ ಮಂಗಳೂರು