ಗಂಗಾವತಿ: ಮಸ್‌ದರ್ ಎಜ್ಯು ಎಂಡ್ ಚಾರಿಟಿ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಸ್‌ದರ್ ತಹ್‌ಫೀಝ್ ಸಂಸ್ಥೆಯಲ್ಲಿ ಎರಡು ದಿನಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ‘ತ್ವೀಬೇ ತ್ವೈಬಾ 2.0’ ಇಲಾಹಿ ಕಾಲೊನಿಯ ಕೆಬಿಎನ್ ಗಾರ್ಡನ್ ಸಭಾಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
ನವೆಂಬರ್ 2 ಶನಿವಾರ ಸಂಜೆ ಆರಂಭವಾದ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಮೌಲಾನಾ ಹನೀಫ್ ಅಮ್ಜದಿ ಉದ್ಘಾಟನೆಗೈದರು. ಸಂಸ್ಥೆಯ ಹಿತೈಷಿಗಳಾದ ಉದ್ಯಮಿ ಅಲ್ ಹಾಜ್ ವಿ ಎ ಮಹ್ಮೂದ್ , ಅಲ್ ಹಾಜ್ ಎಂ ಹುಸೈನ್ ಸಾಬ್ ತುಂಗಭದ್ರಾ ಹಾಗೂ ನವಲಿ ವಿಲೇಜ್ ಅಕೌಂಟೆಂಟ್ ಮಹಬೂಬ್, ಮೌಲಾನಾ ಅಬೂಬಕರ್ ಸಿದ್ದೀಖ್ ಸಖಾಫಿ ಬಾಜಾರ, ಮೌಲಾನಾ ಮುಹಮ್ಮದ್ ನಾಸಿರ್ ಸಖಾಫಿ ಕುಂದಾಪುರ ಅವರು ಉಪಸ್ಥಿತರಿದ್ದರು.
ನವೆಂಬರ್ 03 ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮೌಲಾನಾ ಮುಹಮ್ಮದ್ ಹನೀಫ್ ಅಮ್ಜದಿ ಮುಖ್ಯ ಭಾಷಣ ಮಾಡಿದರು. ಯುವ ಮುಂದಾಳು ಸಲೀಮ್ ಅಳವಂಡಿ, ಮಸ್ಜಿದ್ ಎ ಅಶ್ರಫುಲ್ ಫುಖಹಾ ಇಮಾಮ್ ಹಾಫಿಝ್ ನೌಶಾದ್ ಆಲಮ್, ಸಂಸ್ಥೆಯ ಹಿತೈಷಿ ಸಯ್ಯಿದ್ ಮುಹಮ್ಮದ್ ಗುತ್ತಿ, ಗೌಸ್ ಪೀರ್ ಸಾಹಬ್ ಹೊಸಪೇಟೆ ಹಾಗೂ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸುಮಾರು ನಲ್ವತ್ತರಷ್ಟು ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಂಡು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸದ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಪ್ರಾಧ್ಯಾಪಕರಾದ ಹಾಫಿಝ್ ಅಬ್ದುಲ್ ಬಾಸಿತ್ ಹಿಮಮಿ ಸಖಾಫಿ ಸ್ವಾಗತಿಸಿ, ಮೌಲಾನಾ ಅಲ್ತಾಫ್ ಮುಈನಿ ಸಖಾಫಿ ಕಾರ್ಯಕ್ರಮವನ್ನು ನಿರೂಪಿಸಿದರು.