ರಿಯಾದ್, ನ.3: ಸೌದಿ ಅರೇಬಿಯಾದಲ್ಲಿ(KSA) ಮನೆಗೆ ತೆರಳಲು ಸಾಧ್ಯವಾಗದೆ ಸಿಲುಕಿರುವವರಿಗೆ ಜಿದ್ದಾ ಭಾರತೀಯ ಕಾನ್ಸುಲೇಟ್(Indian Consulates Jedda) ಸ್ವದೇಶಕ್ಕೆ ಮರಳುವ ವ್ಯವಸ್ಥೆಯನ್ನು ಒದಗಿಸಿದೆ.
ಜಿದ್ದಾದಲ್ಲಿರುವ ಭಾರತೀಯ ದೂತಾವಾಸವು, ಇಖಾಮಾವನ್ನು ನವೀಕರಿಸಲು ಸಾಧ್ಯವಾಗದ ಮತ್ತು ಹುರುಬ್ ಸೇರಿದಂತೆ ಇತರ ಬಿಕ್ಕಟ್ಟಿನಿಂದ ಮನೆಗೆ ಹೋಗಲು ಸಾಧ್ಯವಾಗದ ವಲಸಿಗರನ್ನು ಅಂತಿಮ ನಿರ್ಗಮನದಲ್ಲಿ(Fainal Exit) ಕಳುಹಿಸಲು ಅವಕಾಶವನ್ನು ಒದಗಿಸುತ್ತದೆ.
ಮುಂದಿನ ಎರಡು ದಿನಗಳಲ್ಲಿ ಭಾರತೀಯ ದೂತಾವಾಸವನ್ನು ಸಂಪರ್ಕಿಸಬೇಕು ಎಂದು ಕಾನ್ಸುಲೇಟ್ ತಿಳಿಸಿದೆ. ಈ ಅವಕಾಶವನ್ನು ಬಳಸಿಕೊಳ್ಳಲು, http://cgijeddah.org/consulate/exitVisa/reg.aspx ವೆಬ್ಸೈಟ್ನಲ್ಲಿ “ಫೈನಲ್ ಎಕ್ಸಿಟ್ ವೀಸಾ – ನೋಂದಣಿ ನಮೂನೆ”(Fainal Exit Visa-Registration Form) ಎಂಬ ಟ್ಯಾಗ್ನಲ್ಲಿ ವ್ಯಕ್ತಿಯ ಮಾಹಿತಿಯನ್ನು ನಮೂದಿಸುವ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು.
ಸೌದಿಯ ಲಾಕ್ಡೌನ್ಗೆ ಮೊದಲು ಈ ವೆಬ್ಸೈಟ್ ಮೂಲಕ ನೋಂದಾಯಿಸಿದವರು ಮತ್ತೆ ನೋಂದಾಯಿಸಿಕೊಳ್ಳಬೇಕೆಂದಿಲ್ಲ. ನೋಂದಾಯಿಸಲು ಸಾಧ್ಯವಾಗದವರು ಕಾನ್ಸುಲೇಟ್ ಅನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಸಂಖ್ಯೆ +966 556122301 ಅನ್ನು ಸಂಪರ್ಕಿಸಿ.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ