ಮಂಗಳೂರು: ಈಶ್ವರಪ್ಪ ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದ ಬೆನ್ನಲ್ಲೇ ‘ಮುಸ್ಲಿಮ್ ವಿಧ್ಯಾರ್ಥಿನಿಯರಿಗೆ ಮನೆಯವರು ಬುದ್ದಿ ಹೇಳುತ್ತಿದ್ದರೆ ಹೀಗಾಗುತ್ತಿರಲಿಲ್ಲ, ಪ್ರಪಂಚವೇ ಈ ತೀರ್ಪಿನ ಬಗ್ಗೆ ನಿರೀಕ್ಷಿಸುತ್ತಿದೆ’ ಎಂದು ಹೇಳಿಕೆ ನೀಡುವ ಮೂಲಕ ನ್ಯಾಯಾಲಯವನ್ನು ಸಂಪರ್ಕಿಸಿದ ವ್ಯಾಜ್ಯೆದಾರರ ಪೋಷಕರನ್ನು ತರಾಟೆಗೆ ತೆಗೆದುಕೊಂಡ ವಿರುದ್ಧ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡುವ ತೀರ್ಪುಗಳನ್ನು ಗೌರವಿಸುವ, ವಿಮರ್ಶಿಸುವ, ಖೇದ ವ್ಯಕ್ತಪಡಿಸುವಿಕೆಯ ಅಧಿಕಾರ ಇರುವ ಸಾಂವಿಧಾನಿಕ ಹಕ್ಕನ್ನು ಹೊಂದಿರುವ ಭಾರತದಲ್ಲಿ, ತೀರ್ಪಿನ ಬಗ್ಗೆ ಗೌರವ, ವಿಮರ್ಶೆ. ಅಥವಾ ಖೇದ ವ್ಯಕ್ತ ಪಡಿಸದ ಈಶ್ವರಪ್ಪ ನ್ಯಾಯಾಲಯವನ್ನು ಸಂಪರ್ಕಿಸಿದ ವ್ಯಾಜ್ಯೆದಾರರ ಪೋಷಕರನ್ನು ಅಥವಾ ಹೆತ್ತವರನ್ನು ತನ್ನ ಹರಕು ಮಾತಿನ ಮೂಲಕ ತರಾಟೆಗೆ ತೆಗೆದು ಕೊಳ್ಳುವ ಮನಸ್ಥಿತಿ ನಿರ್ಮಾಣವಾದದ್ದು, ಈಶ್ವರಪ್ಪ ಈ ದೇಶದ ಪ್ರಜಾ ಪ್ರಭುತ್ವಕ್ಕೆ,ಕಾನೂನಿಗೆ,ಸಂವಿಧಾನಕ್ಕೆ ಅಂತಿಮವಾಗಿ ಈ ದೇಶದ ನ್ಯಾಯಾಲಯಕ್ಕೆ ಅದೆಷ್ಟು ಗೌರವ ಸಲ್ಲಿಸುತ್ತಾರೆ ಎಂದು ಬಹಿರಂಗವಾಗುತ್ತದೆ.
ತನ್ನ ವಿರುದ್ಧದ, ಉಡುಪಿ ವಸತಿಗೃಹದಲ್ಲಿ ನಡೆದ ಬಹುಚರ್ಚಿತ ಬ್ರಷ್ಟಾಚಾರ ವ್ಯವಸ್ಥೆಯ ಸಂತ್ರಸ್ತ ಸಂತೋಷ್ ಪಟೇಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತ ಸ್ಥಾನವನ್ನು ಮೈಮೇಲೆ ಎಳೆದು ಹಾಕಿ ಕೊಂಡಿದ್ದ ಈಶ್ವರಪ್ಪ ರವರು ಸಂತ್ರಸ್ತನ ಪತ್ನಿಯಿಂದ ಬುದ್ದಿ ಹೇಳಿಸಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿ ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇನ್ನೂ ಮರೆತಿಲ್ಲ ಎಂದು ಕಾಣುತ್ತದೆ.
ಶಿವಮೊಗ್ಗದಲ್ಲಿ ಈ ಹಿಂದೆ ಕಾನೂನು ಶಾಂತಿ ಸುವ್ಯವಸ್ಥೆ ಸಂರಕ್ಷಿಸಲು ಸರಕಾರ ಪ್ರತಿಬಂಧಕ ಆಜ್ಞೆ ಜಾರಿಯಲ್ಲಿ ಇರುವಾಗ ಕಾನೂನು ಉಲ್ಲಂಘಿಸಿ ಗುಂಪು ಸೇರಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಸೃಷ್ಟಿಸಿದ ಈಶ್ವರಪ್ಪ ಇಂದು ಖಾಸಗಿತನದ ತಮ್ಮ ಹಕ್ಕುಗಳನ್ನು ಸಂರಕ್ಷಿಸಲು ನ್ಯಾಯಾಲಯವನ್ನು ಸಂಪರ್ಕಿಸಿದ ವಿಧ್ಯಾರ್ಥಿಗಳಿಗೆ ಬುದ್ದಿ ಹೇಳಬೇಕಿತ್ತು ಎಂದು ಹೇಳಿಕೆ ನೀಡಿರುವುದು,ಅವರು ಜಾಗತಿಕ ಮಹಿಳೆಯರ ಪ್ರಭುದ್ಧತೆಯ ಬಗ್ಗೆಗಿನ ಅರಿವು ಕೊರತೆಯ ವ್ಯಕ್ತಿ ಆಗಿರುವ ಹಾಗೆ ಕಾಣುತ್ತದೆ ಮತ್ತು ಈ ಸ್ಥಿತಿ ಖೇದಕರ.ಈಶ್ವರಪ್ಪ ಈಗಲಾದರೂ ತಮ್ಮ ಪರಿವಾರದ ಸದಸ್ಯರಿಂದ ಮಹಿಳೆಯರ ಪ್ರಭುದ್ಧತೆ ಅಂದರೆ ಏನು ಎಂದು ಕಲಿಯಬೇಕು ಎಂದು ಕೆ.ಅಶ್ರಫ್ (ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಆಕ್ರೋಶ ವ್ಯಕ್ತಪಡಿಸಿದ್ದಾರೆ.