ಮಂಗಳೂರು: ಇತ್ತೀಚೆಗೆ ಮಂಗಳೂರಿನ ಬಜ್ಪೆಯ ಶೋಭಾ ಯಾತ್ರೆಯಲ್ಲಿ ಪ್ರದರ್ಶಿತಗೊಂಡ,’ ಯೋಗಿ ‘ ಬಿಂಬಿತ ಬುಲ್ಡೋಝರ್ ಪ್ರದರ್ಶನ ಸೂಕ್ತ ಸಮಯದಲ್ಲಿಯೇ ಆಗಿದೆ ಎಂದು ಮಾಜಿ ಮೇಯರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ(Mangalore Smart City Project) ಯೋಜನೆಯಲ್ಲಿ ನಡೆದ ಬಹು ಆರೋಪಿತ ಅವ್ಯವಹಾರ ಮತ್ತು ಅಷ್ಟೇ ಮಟ್ಟದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಳೆದ ಮಳೆಗಾಲ ಆರಂಭದಲ್ಲಿ,ಮಂಗಳೂರು ನಗರದ ಹಲವು ಬೀದಿಗಳು ಮತ್ತು ರಸ್ತೆಗಳು ಜಲಾವೃತವಾಗಿ, ನಗರ, ಗ್ರಾಮೀಣ ಮತ್ತು ಅಂತರ್ ಜಿಲ್ಲಾ ಸಾರಿಗೆ ಬಸ್ಸುಗಳ ಒಳಗೆ ಪ್ರಯಾಣಿಕರಿಗೆ ನೆರೆ ಬಾಗ್ಯ ಲಭ್ಯವಾಯಿತು. ಬೀದಿಗಳಲ್ಲಿ ಜನರಿಗೆ ಮತ್ಸ್ಯ ದರ್ಶನ ವಾಗಿ ಹಲವರಿಗೆ ಮತ್ಸ್ಯ ಬೋಜನ ಭಾಗ್ಯವು ದೊರೆತದ್ದನ್ನು ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಮರೆತಿರಬೇಕು ಎಂದರು.
ಮಂಗಳೂರಿನ ಬಹು ಅಂತಸ್ತು ಕಟ್ಟಡಗಳ ವಾಹನ ನಿಲುಗಡೆ ಸ್ಥಳವನ್ನು ಅಧಿಕಾರಿಗಳ ಬೃಷ್ಟತೆಯ ಬೆಂಬಲದಲ್ಲಿ ನಿಯಮ ಉಲ್ಲಂಘಿಸಿ, ವಾಣಿಜ್ಯ ಅಂಗಡಿ ಘಟಕ ಗಳಾಗಿ ಉಪಯೋಗಿಸಿ, ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆ ಗೊಂಡು, ಮಂಗಳೂರು ನಗರದಲ್ಲಿ ಪೊಲೀಸು ಇಲಾಖೆ ನಿರಂತರ ಸಂಚಾರ ನಿಬಿಡತೆಯ ಸಮಸ್ಯೆ ಎದುರಿಸಿ ಜನರಿಂದ ಬೈಸಿ ಕೊಳ್ಳುವ ಸ್ಥಿತಿ ನಿರ್ಮಾಣ ಆದುದನ್ನು ಬಹುಷ್ಯ ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಮರೆತಂತಿದೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಘಾಡ ಮಳೆ ಸುರಿದ ಪರಿಣಾಮವಾಗಿ ಅವೈಜ್ಞಾನಿಕ ಕಮಿಷನ್ ಕಾಮಗಾರಿಯಿಂದಾಗಿ ಬೆಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿ ಹಾಲಿ ‘ ಯೋಗಿ ಮಾದರಿ ‘ ಸರಕಾರವನ್ನು ಜನರು ಮನಸ್ಸೋ ಇಚ್ಛಾ ಉಗಿದು, ಬೈದದನ್ನು ‘ ಯೋಗಿ ಬುಲ್ಡೋಝರ್’ ಆಯೋಜಕರು ಮರೆತಿರಬೇಕು.
ಹೀಗಿರುವಲ್ಲಿ ಮಂಗಳೂರಿನ ‘ ಯೋಗಿ ಬುಲ್ಡೋಝರ್ ‘ ಆಯೋಜಕರು ತಮ್ಮ ಶೋಭ ಯಾತ್ರೆಯಲ್ಲಿ ನೀಡುವ ಸಂದೇಶ ಏನು ಎಂದು ಜನರಿಗೆ ತಿಳಿಸಬೇಕಿದೆ. ಹಾಲಿ ರಾಜ್ಯದಲ್ಲಿ ಆಡಳಿತ ನಡೆಸುವ ಬೊಮ್ಮಾಯಿ ಸರಕಾರ ಈಗಾಗಲೇ ಯೋಗಿ ಬುಲ್ಡೋಝರ್ ಅನ್ನು ಬಳಕೆ ಮಾಡದೆಯೇ ಕರ್ನಾಟಕವನ್ನು ಯುಪಿ ಮಾದರಿಗೊಳಿಸಿ ಆಗಿದೆ.
ಇನ್ನು ‘ ಯೋಗಿ ಬುಲ್ಡೋಝರ್ ‘ ನಲ್ಲಿ ಮಾಡಲಿಕ್ಕೆ ಬಾಕಿ ಇರುವುದು, ಮಾಡಿಟ್ಟ ಅವಶೇಷಗಳನ್ನು ಅಗೆದು ಮಣ್ಣು ಮಾಡುವುದು ಮಾತ್ರ.’ ಯೋಗಿ ಬುಲ್ಡೋಝರ್’ ಶೋಭಯಾತ್ರೆಯ ಪ್ರದರ್ಶನದಲ್ಲಿ ದೃಶ್ಯವು, ನೆಲದ ಮಣ್ಣನ್ನು ಆರು ಅಡಿ ಆಗೆತಗೊಳಿಸುವ ದೃಷ್ಯರಹಿತವಾದದ್ದು ಖೇದಕರ. ವಿಧ್ಯಾ ಮಹತ್ವತೆ ಹೊಂದಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಪ್ರಚೋದಿತ ಟ್ಯಾಬ್ಲೋ ಬಳಕೆಯ ವಿರುದ್ಧ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಕೆ.ಅಶ್ರಫ್ ಆಗ್ರಹಿಸಿದರು.
















ಇನ್ನಷ್ಟು ಸುದ್ದಿಗಳು
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ