janadhvani

Kannada Online News Paper

ಶಾಸಕ ರಾಜೇಶ್ ನಾಯಕ್ ರಿಂದ ಪ್ರತಿಭೆಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

ಮಂಗಳೂರು. ಅ,07:ದಕ್ಷಿಣ ಕನ್ನಡ ಜಿಲ್ಲೆಯಿಂದ ತ್ರೋಬಾಲ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಇವರು ಕ್ರೀಡಾ ಸಮವಸ್ತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು

ಮಂಗಳೂರಿನ ಕೈಕಂಬ ಸಮೀಪದ ಪದವಿ ಪೂರ್ವ ಕಾಲೇಜಿನ ಹುಡುಗರ ತಂಡ ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿ ನಡೆದ ತ್ರೋಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.

ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿದ ಬಿಜೆಪಿ ರಾಜ್ಯ ಹಿಂದುಳಿದ ವರ್ಗದ ಸದಸ್ಯ ಅಬ್ದುಲ್ ರಜಾಕ್ ತೋಕೂರು ಅವರು ರಾಜ್ಯಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿರುವ ವಿದ್ಯಾರ್ಥಿಗಳ ತಂಡದ ಬಗ್ಗೆ ಶಾಸಕ ರಾಜೇಶ್ ನಾಯಕ್ ಅವರ ಗಮನಕ್ಕೆ ತಂದಾಗ, ತಕ್ಷಣ ಸ್ಪಂದಿಸಿ ಸಹಾಯ ನೀಡಿದ ಶಾಸಕರು ಕ್ರೀಡಾಪಟುಗಳಿಗೆ ಬೇಕಾಗುವ ಕ್ರೀಡಾ ಸಹವಾಸಗಳನ್ನು ನೀಡಿ ಶುಭ ಹಾರೈಸಿದರು. ಮುಂದೆಯೂ ಕೂಡ ಸರಕಾರದ ವತಿಯಿಂದ ಸಿಗುವ ಹಾಗೂ ಇತರ ಎಲ್ಲಾ ರೀತಿಯಲ್ಲೂ ಸಹಾಯ ನೀಡುವ ಭರವಸೆಯನ್ನು ನೀಡಿ ಕ್ರೀಡಾಪಟುಗಳ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.

ವರದಿ: ಅದ್ದಿ ಬೊಳ್ಳೂರು

error: Content is protected !! Not allowed copy content from janadhvani.com