ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ರಾಜಿಯಲ್ಲಿ ಇತ್ಯರ್ಥ ಮಾಡಿಸುವುದಾಗಿ ಬೆಳ್ಳಾರೆ ಮಸೂದ್ ಎಂಬ ಯುವಕನನ್ನು ಗೂಂಡಾ ಗುಂಪೊಂದು ಹತ್ಯೆ ನಡೆಸಿರುವುದನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಸರ್ವ ಜನಾಂಗದ ಶಾಂತಿಯತೋಟವಾದ ಈ ಕರುನಾಡಿನಲ್ಲಿ ದಿನದಿಂದ ದಿನಕ್ಕೆ ಅಮಾಯಕರ ಕೊಲೆ ಏರುತ್ತಿದೆ. ಯುವಕನನ್ನು ನಂಬಿಸಿ, ಮೋಸಮಾಡಿ ನಡೆಸಿದ ಈ ಹತ್ಯೆಯು ಹೇಯಕೃತ್ಯವಾಗಿದೆ.
ಸೌಹಾರ್ಧ ಸಮಾಜವನ್ನು ಒಡೆಯುವ ಹಾಗೂ ಚ್ಯುತಿಯುಂಟು ಮಾಡುವ ಸಮಾಜಘಾತಕ ಶಕ್ತಿಯನ್ನು ಮಟ್ಟಾಹಾಕಬೇಕು. ಹತ್ಯೆ ನಡೆಸಿದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ, ಕಠಿಣ ಶಿಕ್ಷೆ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮೃತ ಯುವಕನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಧನವನ್ನು ಒದಗಿಸಿ ಕೊಡಬೇಕೆಂದು ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರುರವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಕೋಶಾಧಿಕಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಅಧ್ಯಕ್ಷರ ಜೊತೆಗಿದ್ದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ