janadhvani

Kannada Online News Paper

ಮಸೂದ್ ಹತ್ಯೆ : ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲೆ ತೀವ್ರ ಖಂಡನೆ

ಈ ವರದಿಯ ಧ್ವನಿಯನ್ನು ಆಲಿಸಿ

ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ರಾಜಿಯಲ್ಲಿ ಇತ್ಯರ್ಥ ಮಾಡಿಸುವುದಾಗಿ ಬೆಳ್ಳಾರೆ ಮಸೂದ್ ಎಂಬ ಯುವಕನನ್ನು ಗೂಂಡಾ ಗುಂಪೊಂದು ಹತ್ಯೆ ನಡೆಸಿರುವುದನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಸರ್ವ ಜನಾಂಗದ ಶಾಂತಿಯತೋಟವಾದ ಈ ಕರುನಾಡಿನಲ್ಲಿ ದಿನದಿಂದ ದಿನಕ್ಕೆ ಅಮಾಯಕರ ಕೊಲೆ ಏರುತ್ತಿದೆ. ಯುವಕನನ್ನು ನಂಬಿಸಿ, ಮೋಸಮಾಡಿ ನಡೆಸಿದ ಈ ಹತ್ಯೆಯು ಹೇಯಕೃತ್ಯವಾಗಿದೆ.

ಸೌಹಾರ್ಧ ಸಮಾಜವನ್ನು ಒಡೆಯುವ ಹಾಗೂ ಚ್ಯುತಿಯುಂಟು ಮಾಡುವ ಸಮಾಜಘಾತಕ ಶಕ್ತಿಯನ್ನು ಮಟ್ಟಾಹಾಕಬೇಕು. ಹತ್ಯೆ ನಡೆಸಿದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ, ಕಠಿಣ ಶಿಕ್ಷೆ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮೃತ ಯುವಕನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಧನವನ್ನು ಒದಗಿಸಿ ಕೊಡಬೇಕೆಂದು ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರುರವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಕೋಶಾಧಿಕಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಅಧ್ಯಕ್ಷರ ಜೊತೆಗಿದ್ದರು.

error: Content is protected !! Not allowed copy content from janadhvani.com