ಮಕ್ಕಾ, ಮೇ.26: ಹಜ್ಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪರವಾನಿಗೆ ಇಲ್ಲದ ವಲಸಿಗರಿಗೆ ಮಕ್ಕಾ ಪ್ರವೇಶ ನಿಷೇಧವು ಇಂದಿನಿಂದ ಜಾರಿಗೆ ಬಂದಿದೆ.
ಅಗತ್ಯ ದಾಖಲೆಗಳನ್ನು ಹೊಂದಿರದ ಎಲ್ಲಾ ವಾಹನಗ ಳು ಮತ್ತು ನಿವಾಸಿಗಳನ್ನು ಹಿಂತಿರುಗಿಸಲಾಗುವುದು, ಈ ದಾಖಲೆಗಳೆಂದರೆ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಪವಿತ್ರ ಸ್ಥಳಗಳಲ್ಲಿ ಕೆಲಸ ಮಾಡಲು ಪ್ರವೇಶ ಪರವಾನಗಿ, ಮಕ್ಕಾದಿಂದ ನೀಡಲಾದ ರೆಸಿಡೆನ್ಸಿ ಪರ್ಮಿಟ್ (ಇಖಾಮಾ), ಉಮ್ರಾ ಮತ್ತು ಹಜ್ ಪರವಾನಗಿಯನ್ನು ಒಳಗೊಂಡಿವೆ.
ಹಜ್ ಯಾತ್ರೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳು ಜಾರಿಗೆ ಬಂದಿದೆ.
ತಪಾಸಣೆಗಾಗಿ ಮಕ್ಕಾ ಗಡಿಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನಷ್ಟು ಟ್ರ್ಯಾಕ್ಗಳನ್ನು ತೆರೆಯಲಾಗುತ್ತದೆ. ಈ ತಿಂಗಳ 31 ರಿಂದ ಹಜ್ ಯಾತ್ರಿಗಳು ಆಗಮಿಸಲು ಪ್ರಾರಂಭಿಸಲಿದ್ದಾರೆ.
ಕೋವಿಡ್ ಪರಿಸ್ಥಿತಿಯನ್ನು ಕೂಡ ಮನಗಂಡು ನಿಯಂತ್ರಣವನ್ನು ಜಾರಿ ಮಾಡಲಾಗಿದೆ. ಸೌದಿ ಆಂತರಿಕ ಸಚಿವಾಲಯವು ಮಕ್ಕಾದಲ್ಲಿ ಕೆಲಸ ಮತ್ತು ಇತರ ಚಟುವಟಿಕೆಗಳಿಗೆ ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ