ಮನು ಕೃಪಾ ಅಣತಿಯ ಮೇರೆಗೆ ಕಾರ್ಯಾಚರಿಸುತ್ತಿರುವ ಪ್ರಸಕ್ತ ಸರಕಾರಕ್ಕೆ ಯಾವುದೇ ಜನಪರ ಯೋಜನೆಗಳಿಲ್ಲ.
ಹಿಂದುತ್ವ, ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಇತ್ಯಾದಿ ಅರೇಬಿಕ್ ಮತ್ತು ಉರ್ದು ಪದಗಳನ್ನು ತನ್ನ ಪ್ರಣಾಳಿಕೆಗೆ ಅಳವಡಿಸಿ, ಈ ದೇಶದ ನೈಜ ಮೂಲ ನಿವಾಸಿಗಳಾದ ದಲಿತರು, ಹಿಂದುಳಿದವರು, ಬುಡಕಟ್ಟು,ಪರಿಶಿಷ್ಟರನ್ನು ಈ ದೇಶದ ಮುಸಲ್ಮಾನರ ಮತ್ತು ಕ್ರೈಸ್ತರ ವಿರುದ್ಧ ಎತ್ತಿಕಟ್ಟಿ ಮತೀಯ ವಿದ್ವೇಶ ಸೃಷ್ಟಿಸಿ ಆಮೂಲಕ ಚುನಾವಣೆ ಗೆದ್ದ ಈ ಮನುವಾದಿ ಪಕ್ಷಕ್ಕೆ, ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕಿದೆ. ಅದರ ಫಲವಾಗಿದೆ ಹಿಜಾಬ್, ಹಲಾಲ್, ಅಝಾನ್, ಮದರಸ ಎಂಬ ಉರ್ದು ಮತ್ತು ಅರೇಬಿಕ್ ಪದಗಳ ಬಳಕೆ.
ಈಗಾಗಲೇ ಹಿಂದುತ್ವದ ಗುಲಾಮಗಿರಿಗೆ ಶರಣಾದ ಈ ವರ್ಗಕ್ಕೆ ಮನುವಾದಿ ಮುತಾಲಿಕ್ ರ ಷಡ್ಯಂತ್ರದ ಮರ್ಮ ಅರ್ಥವಾಗಲಾರದು. ಮನು, ವೈದಿಕ, ವರ್ಣಬೇಧ ಪ್ರತಿಪಾದಕ ಮುತಾಲಿಕ್ ಗೆ ಏನು ಗೊತ್ತು ಜಗತ್ತಿಗೆ ಸಮಾನತೆಯನ್ನು ಪ್ರತಿಪಾದಿಸುವ ದಿವ್ಯ ಖುರ್ ಆನ್ ಬೋಧನೆಯ, ಅಸಮಾನತೆಯ ಬಹಿಷ್ಕಾರವನ್ನು ತರಬೇತಿ ಗೊಳಿಸುವ ಮದರಸ ವ್ಯವಸ್ಥೆಯ ಬಗ್ಗೆ ?.
ಮುತಾಲಿಕ್ ಗೆ ತಾಕತ್ತಿದ್ದರೆ ತನ್ನ ಆರ್. ಎಸ್. ಎಸ್ ಶಾಖೆಯಲ್ಲಿ ಬೋಧಿಸುವ ಮನುಸ್ಮೃತಿ ಕೃತಿಯನ್ನು ಹಿಡಿದು ಸಂವಾದಕ್ಕೆ ಬರಲಿ. ಮದರಸದಲ್ಲಿ ಭೋದಿಸುತ್ತಿರುವುದು ಭಯೋತ್ಪಾದನೆಯೆ? , ಆರ್. ಎಸ್. ಎಸ್ ಶಾಖೆಯಲ್ಲಿ ಕಲಿಸುತ್ತಿರುವುದು ಭಯೋತ್ಪಾದನೆಯೆ ಎಂಬ ಪಾಠ ತೆಗೆಯುತ್ತೇವೆ.
ಆರ್. ಎಸ್. ಎಸ್, ಅರಗ ಮತ್ತು ಮುತಾಲಿಕನ್ನು ಜಂಟಿಯಾಗಿ ಬಳಸಿ ವಿದ್ವಂಸಕ, ಕೋಮು ಕೃತ್ಯಕ್ಕೆ ಇಳಿದಿದೆ. ಪೊಲೀಸು ವ್ಯವಸ್ಥೆಗೆ ಸ್ವಲ್ಪವಾದರೂ ಶಾಂತಿ ಸುವ್ಯವಸ್ಥೆಯ ಕಾಳಜಿ ಇದ್ದರೆ ಈ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಲಿ. ಸರಕಾರದ ಅಧೀನದಲ್ಲಿ ಹುಚ್ಚಾಸ್ಪತ್ರೆ ಇಲ್ಲವಾದಲ್ಲಿ, ನಾಟಿ ಚಿಕಿತ್ಸೆ ಯಾದರೂ ಮಾಡಿಸಲಿ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ