ಮಂಗಳೂರು: ಇತ್ತೀಚೆಗೆ ಶಾಸಕರಾದ ರೇಣುಕಾಚಾರ್ಯ ಕೇಶವ ಕೃಪಾ ಪೋಷಿತ ಹೇಳಿಕೆಗಳನ್ನು ನೀಡುವ ಭರದಲ್ಲಿ ಮದರಸಗಳನ್ನು ನಿಷೇಧಿಸಬೇಕು, ಮದರಾಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತದೆ ಎಂದು ಮತೀಯ ವಿದ್ವೇಶಕ ಹೇಳಿಕೆ ನೀಡಿರುತ್ತಾರೆ.
ಮದರಸಗಳು ಹಿಂದೆ ಸ್ವಾತಂತ್ಯ ಸಂಗ್ರಾಮದ ಚಟುವಟಿಕೆ ಕೇಂದ್ರಗಳಾಗಿದ್ದವು ಎಂದು ಚರಿತ್ರೆಯನ್ನು ಅವಲೋಕಿಸಿ ನೋಡಿ ಕೊಳ್ಳುವುದು ಒಳಿತು. ಮದರಸಗಳು ಇಂದು ನೈಜ ಭಾರತೀಯ ದೇಶ ಪ್ರೇಮಿ ಪ್ರಜೆಗಳನ್ನು ಸೃಷ್ಟಿಸುತ್ತಿದೆ. ಧರ್ಮ ನಿಷ್ಠೆಯ, ನೈತಿಕ ಬೋಧನೆಯ ಸಚಾರಿತ್ರ್ಯದ ಪ್ರಜೆಗಳಾಗಿ ಮಾದರಿ ನಾಗರಿಕರನ್ನಾಗಿ ರೂಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ.
ರೇಣುಕಾಚಾರ್ಯ ತಿಳಿಯಲಿ, ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಚ್ಚಿನ ಮದರಸ ಕೇಂದ್ರಿತ ಸಂಸ್ಥೆಗಳಲ್ಲಿ ಆಚರಿಸಲಾಗುತ್ತಿದೆ. ತ್ರಿವರ್ಣ ಧ್ವಜದ ಘನತೆಯನ್ನು ಎತ್ತಿ ಹಿಡಿಯಲು ಭಾರತದ ಪ್ರತಿ ಮದರಸಗಳು ಬದ್ದವಾಗಿದೆ. ಆದರೆ ಕೇಶವ ಕೃಪಾದಲ್ಲಿ ಕಲಿಸಲಾಗುವ ಸ್ಮೃತಿ ಪಾಠಗಳನ್ನು ಮದರಸದಲ್ಲಿ ಭೋಧಿಸಲಾಗುವುದಿಲ್ಲ. ಅದರಂತೆಯೇ ಮುಗ್ದ ಮಕ್ಕಳಿಗೆ ಸಂಘಗಳಲ್ಲಿ ಕಲಿಸುವ ತಲವಾರು ತರಬೇತಿಯನ್ನು ಮದರಸದಲ್ಲಿ ಭೋಧಿಸಲಾಗುವುದಿಲ್ಲ. ಮದರಸ ಗಳು ಜನವಸತಿ ಕೇಂದ್ರಗಳಲ್ಲಿ ಅಸ್ತಿತ್ವವಿದೆ. ಸಂಘದ ಪಾಠ ಮಾಡುವ ನಿರ್ಜನ ಮೈದಾನದ ಹಾಗೆ ಅಲ್ಲ. ರೇಣುಕಾಚಾರ್ಯ ಅರಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ