ಮನಾಮ: ಹವಳದ ದ್ವೀಪದಲ್ಲಿ ಕಾರ್ಯಾಚರಿಸುತ್ತಿರುವ ಬಹರೈನ್ ಕೆ.ಸಿ.ಎಫ್ ವೈವಿಧ್ಯಮಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ತನ್ನ ಜೈತ್ರಯಾತ್ರೆಯನ್ನು ಮುಂದುವರಿಸುತ್ತಿದೆ.
ಸಂಘಟನಾ ಕಾರ್ಯಚಟುಟಿಕೆಗಳನ್ನು ಇನ್ನಷ್ಟು ಸಕ್ರೀಯಗೊಳಿಸುವ ನಿಟ್ಟಿನಲ್ಲಿ ಗುದೈಬಿಯ ಬಲೂಚಿ ಮಸೀದಿಯ ಸನಿಹದಲ್ಲಿರುವ ಸುಸಜ್ಜಿತವಾದ ಕೆ.ಸಿ.ಎಫ್ ಬಹರೈನ್ ನೂತನ ಕೇಂದ್ರ ಕಚೇರಿಯನ್ನು ದಿನಾಂಕ 17.03.2022 ಗುರುವಾರ ರಾತ್ರಿ 8:30 ಕ್ಕೆ ಸರಿಯಾಗಿ ಅಲ್ ಖಾದಿಸ ಚೇರ್ಮ್ಯಾನ್ ಬಹುಮಾನ್ಯರಾದ ಕಾವಲ್ ಕಟ್ಟೆ ಹಝ್ರತ್ ರವರು ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ರವರು ವಹಿಸಿದ್ದರು.ಕಾರ್ಯಕ್ರಮದ ಭಾಗವಾಗಿ ಜಲಾಲಿಯ ರಾತೀಬ್ ಮತ್ತು ಕೆಸಿಎಫ್ ಬಹರೈನ್ ವತಿಯಿಂದ ವಾರಕ್ಕೊಮ್ಮೆ ನಡೆಯುವ ಸ್ವಲಾತ್ ಮಜ್ಲಿಸ್ ಹಾಗೂ ಬರಾಹತ್ ದಿನದ ಪ್ರಯುಕ್ತ ದುಃಆ ಸಂಗಮವು ನಡೆಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಐಎನ್ಸಿ ಸಾಂತ್ವನ ಅಧ್ಯಕ್ಷರಾದ ಅಲಿ ಮುಸ್ಲಿಯಾರ್, ಕೆಎಂಸಿಸಿ ಬಹರೈನ್ ಉಪಾಧ್ಯಕ್ಷರಾದ ಶಾಫಿ ಪಾರಕಟ್ಟ, ಕಲಂದರ್ ರಝ್ವಿ ಕಾವಲ್ಕಟ್ಟೆ, ರಾಷ್ಟ್ರೀಯ ಸಮಿತಿಯ,ಝೋನ್ ಸೆಕ್ಟರ್ ಗಳ ನಾಯಕರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತಾರರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಬಂದ ಅತಿಥಿಗಳನ್ನ ಸ್ವಾಗತಿಸಿ, ಪ್ರಕಾಶನ ಅಧ್ಯಕ್ಷರಾದ ಲತೀಫ್ ಪೇರೋಲಿ ಧನ್ಯವಾದಗೈದರು.

















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ