ಮಾರ್ಚ್ 3 ರಂದು ಪ್ರಾರಂಭಗೊಂಡು 13 ರಂದು ಸಮಾಪ್ತಿಗೊಳ್ಳಲಿರುವ ಹತ್ತು ದಿನಗಳ ಇತಿಹಾಸ ಪ್ರಸಿದ್ಧ ಕನ್ಯಾನ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿರವರ ಉದಯಾಸ್ತಮಾನ ಊರೂಸ್ ಮುಬಾರಕಿನ ಸಮಾರೋಪ ಸಮಾರಂಭಕ್ಕೆ ಇಂದು ಮಗ್ರಿಬ್ ನಮಾಜ್ ಬಳಿಕ ಬದುರುಸ್ಸಾದಾತ್ ಅಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಲ್ ಕಡಲುಂಡಿ ಕೇರಳ ರವರು ದುಆ ಮಜ್ಲಿಸಿಗೆ ನೇತೃತ್ವ ನೀಡಲಿದ್ದಾರೆ.
ಹಾಗೂ ಕರ್ನಾಟಕ ರಾಜ್ಯ ವಕ್ಫ್ ಬೋಡ್೯ ಅಧ್ಯಕ್ಷ ಮೌಲಾನ ಶಾಫಿ ಸಅದಿ ಬೆಂಗಳೂರು , ಸೈಯದ್ ಹಬೀಬುಲ್ಲಾಹಿ ತಂಙಳ್ ಪೆರುವಾಯಿ ಮತ್ತು ಇನ್ನಿತರ ಗಣ್ಯರು ಬಾಗವಹಿಸಲಿದ್ದಾರೆ
ಹಾಗೂ ಹಂಝ ಮಿಸ್ಬಾಹಿ ಓಟಪದವು ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಸಂಜೆ ನಡೆಯುವ ಸ್ನೇಹ ಸಂಗಮದಲ್ಲಿ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ , ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್, ರಮಾನಾಥ ರೈ, ಯು.ಟಿ ಕಾದರ್, ಎ ಕೆ ಎಂ ಅಶ್ರಫ್ ಬಾಗವಹಿಸಲಿದ್ದಾರೆ.
ಆದಿತ್ಯವಾರ ನಡೆಯುವ ಮೌಲಿದ್ ಮಜ್ಲಿಸಿಗೆ ಕನ್ಯಾನ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್, ಅಸೈಯದ್ ಬದ್ರುದ್ದೀನ್ ತಂಙಳ್ ಚಿಪ್ಪಾರ್ ,ಶೈಖುನಾ ಕನ್ಯಾನ ಉಸ್ತಾದ್ ಮೊದಲಾದವರು ನೇತೃತ್ವ ನೀಡಲಿದ್ದಾರೆ.
ಊರ ಪರವೂರ ಸಾವಿರಾರು ಮಂದಿಗೆ ಅನ್ನದಾನ ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕನ್ಯಾನ ಜಮಾಅತ್ ಅನಿವಾಸಿ ಮಿತ್ರರು ಕರೆ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್