janadhvani

Kannada Online News Paper

ಉಪ್ಪಿನಂಗಡಿ ಅಪಘಾತ: ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದ ಆನಂದ್ ವಿರುದ್ಧ ದೂರು ದಾಖಲು

ಅಪಘಾತದಲ್ಲಿ ಸಾಹಿದಾ ಹಾಗೂ ಅವರ ಒಂದು ವರ್ಷದ ಮಗು ಸಾಹಿಲ್ ಮೃತಪಟ್ಟಿದ್ದಾರೆ

ಉಪ್ಪಿನಂಗಡಿ,ಅ.13: ದಿನಾಂಕ:12/10/2021 ಮಂಗಳವಾರ ಮುಂಜಾನೆ ಉಪ್ಪಿನಂಗಡಿ ಬಸ್ಸ್ ನಿಲ್ದಾಣದಲ್ಲಿ ಗರ್ಭಿಣಿ ಸಾಹಿದಾ(25) ಹಾಗೂ ಅವರ ಒಂದು ವರ್ಷದ ಮಗು ಸಾಹಿಲ್ ನಡೆದಾಡಿಕೊಂಡು ಹೋಗುತ್ತಿರುವಾಗ ಕೆ.ಎಸ್.ಅರ್.ಟಿ.ಸಿ ಬಸ್ಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ.

ಬಸ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಅಡಿಗೆ ಬಿದ್ದು ಅಪಘಾತದ ತೀವ್ರತೆಗೆ ತಾಯಿ,ಮಗು ಜೀವಕಳೆದುಕೊಂಡಿದನ್ನು ಸೋಶಿಯಲ್ ಮೀಡಿಯಾದಲ್ಲಿ ವಿಕೃತವಾಗಿ ಕಾಮೆಂಟ್ ಹಾಕಿ ಸಂಭ್ರಮಿಸಿದ ಡ್ರೈವರ್ ಆನಂದ್ ಎಂಬವನ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಉಪ್ಪಿನಂಗಡಿ ಬ್ಲಾಕ್ ಸದಸ್ಯರಾದ ಇಕ್ಬಾಲ್ ಕೆಂಪಿ ದೂರು ದಾಖಲಿಸಿದರು.

ಝಕರಿಯ್ಯಾ ಕೊಡಿಪ್ಪಾಡಿ,
ಮುಸ್ತಫಾ ಲತೀಫಿ,ಅಬ್ದುಲ್ ಮಜೀದ್ ಮಠ, ಹಸೈನಾರ್ ಉಪ್ಪಿನಂಗಡಿ ನಿಯೋಗದಲ್ಲಿದ್ದರು.