janadhvani

Kannada Online News Paper

ದ.ಕ.ಜಿಲ್ಲೆ- ಕೇರಳ ಗಡಿ ತೆರವಿಗೆ ಶೀಘ್ರದಲ್ಲೇ ತೀರ್ಮಾನ- ಸಿಎಂ

ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು

ಮಂಗಳೂರು,ಅ.13: ಕೇರಳ ಗಡಿ ನಿರ್ಬಂಧ ತೆರವಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದ.ಕ. ಮತ್ತು ಉಡುಪಿ ಜಿಲ್ಲೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಹೇಳಿಕೆ ನೀಡಿದರು. ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಈ ವೇಳೆ ಅನೈತಿಕ ಪೊಲೀಸ್‌ ಗಿರಿ ಮಾಡಿದವರ ರಕ್ಷಣೆಗೈದ ಆರೋಪ ಎದುರಿಸುವ ಮೂಡುಬಿದಿರೆ ಶಾಸಕ‌ ಉಮನಾಥ ಕೋಟ್ಯಾನ್ ಕೃತ್ಯದ ಬಗ್ಗೆ ಪತ್ರಕರ್ತರ‌ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಸಿಎಂ ನಿರಾಕರಿಸಿದರು.