janadhvani

Kannada Online News Paper

ಎಸ್.ವೈ.ಎಸ್ ಮೂಡಬಿದ್ರೆ ಸೆಂಟರ್ : ನವ ಸಾರಥಿಗಳು

ಸೆಪ್ಟೆಂಬರ್ 30 ರಂದು ರಾತ್ರಿ 7 ಗಂಟೆಗೆ ಅಲ್ ಮಫಾಝ್ ಮೂಡಬಿದ್ರೆಯಲ್ಲಿ ಎಸ್.ವೈ.ಎಸ್ ಮೂಡಬಿದ್ರೆ ಸೆಂಟರ್ ಮಹಾಸಭೆ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ಮಾರ್ನಾಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಿ ಎಚ್ ಇಬ್ರಾಹಿಂ ಸ‍ಅದಿ ಕೆರೆಬಳಿ ಉದ್ಘಾಟಿಸಿದರು.

ಎಸ್.ವೈ.ಎಸ್ ದ.ಕ ಜಿಲ್ಲೆ(ವೆಸ್ಟ್) ಅಧ್ಯಕ್ಷರಾದ ಮಹಮ್ಮದ್ ಅಲಿ ಸುರಿಬೈಲ್ ಸಖಾಫಿ ಯವರು ಸಂಘಟನೆಯು ಬಂದ ಹಾದಿ ಹಾಗೂ ಸಂಘಟನೆಯ ಉದ್ದೇಶದ ಬಗ್ಗೆ ಹಲವು ಉದಾಹರಣೆಗಳ ಸಮೇತ ವಿವರಿಸಿದರು.

ಎಸ್.ವೈ.ಎಸ್ ದ.ಕ ಜಿಲ್ಲೆ(ವೆಸ್ಟ್) ಪ್ರ.ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಉಸ್ತಾದ್ ಕಾವೂರ್ ತರಗತಿ ನಡೆಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ:- ಅಬ್ದುಲ್ ಸಲಾಂ ಮದನಿ ಉಸ್ತಾದ್ (ಮಾರ್ನಾಡ್), ಪ್ರಧಾನ ಕಾರ್ಯದರ್ಶಿ:- ಅಬ್ದುಲ್ ಲತೀಫ್ (ಉಳ್ಳಾಲ ಕೆರೆಬಳಿ) ,ಕೋಶಾಧಿಕಾರಿ ಹನೀಫ್ (ಗಂಟಲ್ ಕಟ್ಟೆ), ಉಪಾಧ್ಯಕ್ಷರು ಪಿ.ಹೆಚ್ ಉಸ್ಮಾನ್ (ಕೆರೆಬಳಿ), ದಅವಾ ಕಾರ್ಯದರ್ಶಿ:- ಎಲ್.ಹೆಚ್ ಶರೀಫ್ ಸಅದಿ (ಮೂಡಬಿದ್ರೆ), ಇಸಾಬಾ ಕಾರ್ಯದರ್ಶಿ:- ಸರ್ಫರಾಝ್ (ಪುತ್ತಿಗೆ), ಓರ್ಗ ನೈಸ್ ಕಾರ್ಯದರ್ಶಿ:- ಅಬ್ದುಲ್ ಜಬ್ಬಾರ್ (ಅಪೂರ್ವ ನಗರ), ಸೋಶಿಯಲ್ ಕಾರ್ಯದರ್ಶಿ:- ಎಮ್
ಎ. ಖಾದರ್ (ಗುಂಡುಕಲ್ಲು)ಹಾಗೂ 17 ಕಾರ್ಯಕಾರಿ ಸದಸ್ಯರುಗಳು
ಒಟ್ಟು 25 ಸದಸ್ಯರೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.