ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಬ್ಲಡ್ ಸೈಬೊದ 9 ನೇ ರಕ್ತದಾನ ಶಿಬಿರವನ್ನು ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ಸಹಕಾರದೊಂದಿಗೆ, ಶಿವಮೊಗ್ಗ ಮೆಗ್ಗಾನ್ ರಕ್ತ ನಿಧಿ ಕೇಂದ್ರರವರ ಸಹಯೋಗದೊಂದಿಗೆ ತಾಲೂಕು ಸರ್ಕಾರಿ ಆಸ್ಪತ್ರೆ ನರಸಿಂಹರಾಜಪುರದಲ್ಲಿ 31 ಜುಲೈ 2021 ರಂದು ನಡೆಸಲಾಯಿತು.
ಪ್ರಸ್ತುತ ಶಿಬಿರವನ್ನು ಸೈಯ್ಯದ್ ಜಾಬೀರ್ ತಂಙಳ್ ರವರ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ನರಸಿಂಹರಾಜಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಶಿಬಿರದ ಅಧ್ಯಕ್ಷ ಪೀಠ ಅಲಂಕರಿಸಿದರು.
ಶಿಬಿರದ ಸ್ವಾಗತ ಬಾಷಣವನ್ನು ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ಅವರು ನೆರವೇರಿಸಿದರು.
ಉದ್ಘಾಟನೆಯನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯರು ಹಾಗೂ ಚಿಕ್ಕಮಗಳೂರು ಜಿಲ್ಲಾ ನಾಯಕರಾದ ಸಫ್ವಾನ್ ಸಖಾಫಿರವರು ನೆರವೇರಿಸಿ ಬ್ಲಡ್ ಸೈಬೋ ತಂಡವು ಚಿಕ್ಕಮಗಳೂರು ಜಿಲ್ಲಾದ್ಯಂತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವುದರ ಮೂಲಕ ಜಿಲ್ಲೆಯಲ್ಲಿ ಯಾವುದೇ ರೋಗಿಗೂ ಕೂಡ ರಕ್ತವಿಲ್ಲದೆ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತದೆ.
ಇದೇ ರೀತಿಯ ಸೇವೆ ಮುಂದಿನ ದಿನಗಳಲ್ಲೂ ತಮ್ಮಿಂದ ಮುಂದುವರಿಯಲಿದೆ ಎಂಬ ಆಶಿಸುತ್ತಿದ್ದೇವೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಹನುಮಂತಪ್ಪನವರು ಮಾತನಾಡಿ ಎಸ್ಸೆಸ್ಸೆಫ್ ಸಂಘಟನೆಯು ರಕ್ತದಾನ ಶಿಬಿರ ನಡೆಸಲು ಅಸಾಧ್ಯವಾದ ಸಮಯದಲ್ಲಿ ಸ್ವತಃ ಕಾರ್ಯಕರ್ತರೇ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡುವ ಮೂಲಕ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ತಮ್ಮ ನಿಸ್ವಾರ್ಥ ಸೇವೆಗೈಯುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೂಡ ನಿಮ್ಮ ಸೇವೆಯು ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಝೈನುಲ್ ಆಬಿದ್ ಸಖಾಫಿ, ಜಿಲ್ಲಾ ಬ್ಲಡ್ ಸೈಬೋ ಚೀಫ್ ಕೋಆರ್ಡಿನೇಟರ್ ಶಾಹಿನ್, ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ಬ್ಲಡ್ ಸೈಬೋ ಚೀಫ್ ಕೋಆರ್ಡಿನೇಟರ್ ಶಮೀಮ್, ಕೊಪ್ಪ ಡಿವಿಷನ್ ಅಧ್ಯಕ್ಷರು ಯಸೀನ್ ಶೆಟ್ಟಿಕೊಪ್ಪ ಪ್ರದಾನ, ಕಾರ್ಯದರ್ಶಿ ಮುಸ್ತಫ ಜೋಗಿಸರ ಎಸ್ಸೆಸ್ಸೆಫ್, ಸಮಾಜ ಸೇವಕಿ ಜುಬೈದ, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಸದಸ್ಯರು, ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ಸದಸ್ಯರು ಹಾಗೂ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿವರ್ಗದವರು, ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ