ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗುವ ಸಂದೇಶಗಳಿಗೆ ಯಾವುದೇ ಸಾಕ್ಷ್ಯಾಧಾರದ ಮೌಲ್ಯವಿಲ್ಲ ಎಂದು ಹೇಳಿದೆ. ಮುಖ್ಯವಾಗಿ ಒಪ್ಪಂದಗಳ ಮೂಲಕ ನಡೆಯುವ ಉದ್ಯಮ ಪಾಲುದಾರಿಕೆಗಳಲ್ಲಿ ವಾಟ್ಸಾಪ್ ಸಂದೇಶಗಳ ಸೃಷ್ಟಿಕರ್ತನನ್ನು ಅವುಗಳಿಗೆ ಹೊಣೆಗಾರನನ್ನಾಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
‘ಈ ದಿನಗಳಲ್ಲಿ ವಾಟ್ಸಾಪ್ ಸಂದೇಶಗಳಿಗೆ ಯಾವ ಸಾಕ್ಷ್ಯಾಧಾರದ ಮೌಲ್ಯವಿದೆ? ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನು ಬೇಕಾದರೂ ಸೃಷ್ಟಿಸಬಹುದು ಮತ್ತು ಅಳಿಸಿ ಹಾಕಬಹುದು. ವಾಟ್ಸಾಪ್ ಸಂದೇಶಗಳಲ್ಲಿ ಯಾವುದೇ ಮೌಲ್ಯ ಇದೆ ಎಂದು ನಾವು ಪರಿಗಣಿಸುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ?
ತ್ಯಾಜ್ಯ ಸಾಮಗ್ರಿ ಸಂಗ್ರಹ ಮತ್ತು ಸಾಗಾಣಿಕೆಗಾಗಿ ದಕ್ಷಿಣ ದಿಲ್ಲಿ ಪಾಲಿಕೆ (ಎಸ್ಡಿಎಂಸಿ) ಮತ್ತು ಎ2ಜೆಡ್ ಇನ್ಫ್ರಾ ಸರ್ವೀಸಸ್ ಹಾಗೂ ಮತ್ತೊಂದು ಸಂಸ್ಥೆ ನಡುವೆ 2016ರ ಡಿಸೆಂಬರ್ 2ರಂದು ಸಮ್ಮತಿ ಒಪ್ಪಂದ ನಡೆದಿತ್ತು. 2017ರ ಏಪ್ರಿಲ್ 28ರಂದು ಎ2ಜೆಡ್ ಕಂಪೆನಿಯು ಕ್ಯುಪ್ಪೋ ಇನ್ಫ್ರಾಸ್ಟ್ರಕ್ಚರ್ ಎಂಬ ಮತ್ತೊಂದು ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಂಡಿತ್ತು. ಎ2ಜೆಡ್ನಿಂದ ಸಿಗುವ ಎಲ್ಲ ಹಣವನ್ನೂ ಮೂರನೇ ವ್ಯಕ್ತಿ ಖಾತೆಯಲ್ಲಿ ಇರಿಸಿ, ಅದರ ಮೂಲಕ ಉಳಿದ ಎಲ್ಲ ಪಾವತಿಗಳನ್ನು ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಕಳೆದ ವರ್ಷ ಮೇ 28ರಂದು ಎ2ಜೆಡ್ ಎಲ್ಲ ಗುತ್ತಿಗೆ ಒಪ್ಪಂದಗಳನ್ನೂ ರದ್ದುಗೊಳಿಸಿದ್ದರಿಂದ ಕ್ಯುಪ್ಪೋ ಸಂಸ್ಥೆ
ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. 2020ರ ಮಾರ್ಷ್ 19ರಂದು ವಾಟ್ಸಾಪ್ ಸಂದೇಶದಲ್ಲಿ ಎ2ಜೆಡ್ ಸಂಸ್ಥೆಯು ಕ್ಯುಪ್ಪೋಗೆ 8.18 ಕೋಟಿ ರೂ ಪಾವತಿ ಹಣ ಬಾಕಿ ಇರುವುದನ್ನು ಒಪ್ಪಿಕೊಂಡಿತ್ತು. ಅಲ್ಲದೆ ಕ್ಯುಪ್ಪೋ, 2018ರಲ್ಲಿ ಎಸ್ಡಿಎಂಸಿಯಿಂದ ಪಡೆದ ಎ2ಜೆಡ್ ತನ್ನ ಎಲ್ಲ ಹಣವನ್ನೂ ಮೂರನೇ ವ್ಯಕ್ತಿ ಖಾತೆಯಲ್ಲಿ ಠೇವಣಿ ಇರಿಸುವುದಾಗಿ ಇಮೇಲ್ ಕಳುಹಿಸಿದ್ದನ್ನೂ ಅದು ತೋರಿಸಿತ್ತು.
ಸುಪ್ರೀಂ ಕೋರ್ಟ್ನ ಅಧಿಕೃತ ಸಂವಹನಕ್ಕೆ ಇನ್ನು ಮುಂದೆ ವಾಟ್ಸಾಪ್ ಬಳಕೆ ಇಲ್ಲ
ವಾಟ್ಸಾಪ್ ಪುರಾವೆಯಾಗಲಾರದು
ವಾಟ್ಸಾಪ್ ಸಂದೇಶವು ನಕಲಿಯಾಗಿದ್ದು, ಅದನ್ನು ತಿರುಚಲಾಗಿದೆ ಎಂದು ಎ2ಜೆಡ್ ವಾದಿಸಿತ್ತು. ಆದರೆ ಕಲ್ಕತ್ತಾ ಹೈಕೋರ್ಟ್, ಕ್ಯುಪ್ಪೋ ಪರ ತೀರ್ಪು ನೀಡಿತ್ತು. ಮೂರನೇ ವ್ಯಕ್ತಿ ಖಾತೆಗೆ ಹಣ ಪಾವತಿಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ವಾಟ್ಸಾಪ್ ಸಂದೇಶದ ಭಾಗವನ್ನು ತಾನು ಒಪ್ಪುವುದಿಲ್ಲ ಎಂದು ತಿಳಿಸಿತು.
ನ್ಯಾಯಮಂಡಳಿಯ ಬಳಿ ಈ ಪ್ರಕರಣ ಬಗೆಹರಿಸಿಕೊಳ್ಳಬೇಕು. ಅದರ ತೀರ್ಪಿಗೆ ಎರಡೂ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.
ಆದರೆ, ಸುಪ್ರೀಂಕೋರ್ಟ್ ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ವಾಟ್ಸಾಪ್ ಮೂಲಕ ಯಾವುದೇ ಬಲವಾದ ಪುರಾವೆ ರವಾನಿಸಿದ್ದರೂ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎನ್ನುವುದು ಅಪರಾಧಿಗಳಿಗೆ ರಕ್ಷಣೆ ಒದಗಿಸುವ ಅವಕಾಶವನ್ನೂ ಒದಗಿಸಬಹುದು. ವಾಟ್ಸಾಪ್ ಮೂಲಕ ಅಪರಾಧದ ವಿಡಿಯೋ ರವಾನಿಸಿದ್ದರೆ ಅದನ್ನು ಸಾಕ್ಷ್ಯ ಎಂದು ಪರಿಗಣಿಸದೆ ಇದ್ದರೆ ಸೂಕ್ತ ನ್ಯಾಯ ದೊರಕದೆ ಇರುವ ಸಂಭವ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ