ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಂಡೆಟ್ಸ್ ಫೆಡರೇಶನ್ ಇದರ SSF ಚೆನ್ನಾವರ ಶಾಖೆಯ ಮಹಾಸಭೆಯು ಚೆನ್ನಾವರ ಶಾಖಾಧ್ಯಕ್ಷ ಇಸ್ಮಾಈಲ್ ಹನೀಫಿಯರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಸಿ.ಎಫ್. ನಾಯಕ ಯೂಸುಫ್ ಹಾಜಿ ಸಂಘಟನೆಯ ಮಹತ್ವ ಮತ್ತು ಸಂಘಟನೆ ಸಾಗಿ ಬಂದ ಹಾದಿಯನ್ನು ತಿಳಿಸಿದರು. ಒಂದು ವರ್ಷದ ಸಂಘಟನಾ ಚಟುವಟಿಕೆಗಳ ವರದಿ ಮತ್ತು ಲೆಕ್ಕ ಪತ್ರವನ್ನು ನಿಝಾರ್ ಮುಸ್ಲಿಯಾರ್ ವಾಚಿಸಿದರು.
ಚುನಾವಣಾ ವೀಕ್ಷಕರಾಗಿ ಬಂದ ಹಾಫಿಝ್ ರಂಶೀದ್ ಸಖಾಫಿಯವರು ಮಾತನಾಡಿ ಸೆಕ್ಟರ್ ನಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯಚರಿಸುವ ಚೆನ್ನಾವರ ಶಾಖೆಯ ಕಾರ್ಯ ಚಟುವಟಿಕೆಗಳು ನಿಜಕ್ಕೂ ಇತರ ಶಾಖೆಗಳಿಗೆ ಮಾದರಿ ಎಂದು ಶ್ಲಾಘಿಸಿದರು. ಸಂಘಟನೆಗೆ ಬೇಕಾಗಿ ಅವಿರತ ಶ್ರಮ ವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವೆಂದೂ ಕಾರ್ಯಾಚರಣೆಯಲ್ಲಿ ಇಖ್ಲಾಸ್ ಮುಖ್ಯವೆಂದು ತಿಳಿಸಿ ಪ್ರಾಸ್ತಾವಿಕ ಮತುಗಳನ್ನಾಡಿದರು. ಕ್ಯಾಂಪಸ್ ಕಾರ್ಯದರ್ಶಿ ಇರ್ಷಾದ್ ಘಟ್ಟಮನೆ ಶುಭಹಾರೈಸಿದರು. ಸೆಕ್ಟರ್ ನಾಯಕರಾದ ಮುಹ್ಸಿನ್ ಕಟ್ಟುತ್ತಾರ್ ಹಾಗೂ ಇಲ್ಯಾಸ್ ಕಟ್ಟತ್ತಾರ್ ಜೊತೆಗಿದ್ದರು.
ಬಳಿಕ ಸಂಘಟನೆಗೆ ನೂತನ ಸಮಿತಿಯನ್ನು ರಚಿಸಲಾಯ್ತು.
ಅಧ್ಯಕ್ಷರು ಇಸ್ಮಾಇಲ್ ಹನೀಫಿ
ಪ್ರಧಾನ ಕಾರ್ಯರ್ಶಿಯಾಗಿ ಅಬ್ದುಲ್ ಆಸಿಫ್
ಉಪಾದ್ಯಕ್ಷರಾಗಿ ನಿಝಾರ್ ಮುಸ್ಲಿಯಾರ್ , ಅಬ್ದಲ್ ನೌಷಾದ್ .
ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುನಾಝ್, ಮುಹಮ್ಮದ್ ಶಹೀಲ್.
ಕ್ಯಾಂಪಸ್ ಕಾರ್ಯದರ್ಶಿ ಸಯ್ಯಿದ್ ನುಐಮಾನ್.
ಸೆಕ್ಟರ್ ಕೌನ್ಸಿಲರ್ -ಅಮೀನ್ ಝುಹ್ರಿ ಆಸ್ಸಅದಿ, ಇಕ್ಬಾಲ್ ಮಾಸ್ಟರ್, ಇಬ್ರಾಹಿಂ ಮುನಾಝ್.
ಸದಸ್ಯರು : ಮುಸ್ತಫ C.M, ಅಬ್ದುಲ್ ಬಾಸಿತ್, ನವಾಝ್, ಅಬ್ದುಲ್ ಜಬ್ಬಾರ್, ವಫೀಕ್ ಅಹ್ಮದ್ ಆಯ್ಕೆಗೊಂಡರು.
ಅಮೀನ್ ಝುಹ್ರಿ ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಅಬ್ದುಲ್ ಆಸಿಫ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ