janadhvani

Kannada Online News Paper

ಭಾರೀ ಮಳೆಗೆ ಗುಂಡೀರು ತಡೆಗೋಡೆ ಕುಸಿತ,ಅಪಾಯದಲ್ಲಿ ಕೆಲವು ಮನೆಗಳು

ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತೆಂಕ ಮಿಜಾರ್ ಗ್ರಾಮದ ಗುಂಡೀರ್ ಗುಡ್ಡದ ತಡೆಗೋಡೆ ಜರಿದು ಬಿದ್ದಿದ್ದು, ಎರಡು ಮನೆಗಳು ಅಪಾಯದ ಅಂಚಿನಲ್ಲಿದೆ.

ಮಯ್ಯದ್ದಿ ಅವರ ಮನೆ ಹಾಗೂ ಸಿರಾಜುದ್ದೀನ್ ಅವರ ಮನೆ ಅಪಾಯದ ಅಂಚಿನಲ್ಲಿದ್ದು, ಮನೆಗೆ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇದೆ. ಮನೆಯಿಂದ ಸ್ಥಳಂತರಿಸುವಂತೆ ಸೂಚಿಸಲಾಗಿದೆ.

ಮಾಜಿ ಶಾಸಕರಾದ ಅಭಯ ಚಂದ್ರ ಜೈನ್, ತೋಡಾರ್ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಏರ್ ಇಂಡಿಯಾ ಉಸ್ಮಾನ್, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಗುಂಡೀರ್ ಹಾಗೂ ತೆಂಕ ಮಿಜಾರು ವಿ.ಎ.ದೀಪಿಕ, ಎಸ್. ಐ.ವಿನಾಯಕ ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲಿಸಿದರು.