ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತೆಂಕ ಮಿಜಾರ್ ಗ್ರಾಮದ ಗುಂಡೀರ್ ಗುಡ್ಡದ ತಡೆಗೋಡೆ ಜರಿದು ಬಿದ್ದಿದ್ದು, ಎರಡು ಮನೆಗಳು ಅಪಾಯದ ಅಂಚಿನಲ್ಲಿದೆ.
ಮಯ್ಯದ್ದಿ ಅವರ ಮನೆ ಹಾಗೂ ಸಿರಾಜುದ್ದೀನ್ ಅವರ ಮನೆ ಅಪಾಯದ ಅಂಚಿನಲ್ಲಿದ್ದು, ಮನೆಗೆ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇದೆ. ಮನೆಯಿಂದ ಸ್ಥಳಂತರಿಸುವಂತೆ ಸೂಚಿಸಲಾಗಿದೆ.