janadhvani

Kannada Online News Paper

ಜಾಲ್ಸೂರು ವಲಯ ಎಸ್ಡಿಪಿಐ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ

ಸುಳ್ಯ, ಆ.30: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆಯುಷ್ಮಾನ್ ಆರೋಗ್ಯ ಕಾರ್ಡ್” ನೋಂದಣಿ ಅಭಿಯಾನ ಕಾರ್ಯಕ್ರಮವು ಪೈಚಾರ್ ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುನ್ನೂರಕ್ಕಿಂತಲು ಅಧಿಕ ಫಲಾನುಭವಿಗಳು ಮತ್ತು ಹಿತೈಷಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ SDPI ಜಾಲ್ಸೂರು ವಲಯ ಅಧ್ಯಕ್ಷರಾದ ಆಬಿದ್ ಪೈಚಾರ್, ನಗರಾದ್ಯಕ್ಷರಾದ ಇಕ್ಬಾಲ್ ಸುಳ್ಯ,ಜಾಲ್ಸೂರು ವಲಯ ಕಾರ್ಯದರ್ಶಿ ಕರೀಂ ಬಿ.ಎಸ್. ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ನ ಅಧ್ಯಕ್ಷರಾದ ಬಶೀರ್ ಆರ್.ಬಿ,ಅಸ್ತ್ರ ಸ್ಪೊರ್ಟ್ಸ್ ಕ್ಲಬ್ ಗೌರವಾಧ್ಯಕ್ಷರಾದ ಶಾಫಿ ಪ್ರಗತಿ , ಉದ್ಯಮಿಗಳಾದ ಮಧುಸೂದನ್ ಸುಳ್ಯ,ಪಿಎಫ್ಐ ಸುಳ್ಯ ವಲಯ ಅದ್ಯಕ್ಷರಾದ ರಝಾಕ್ ಪೈಚಾರ್,
CFI ಸುಳ್ಯ ವಲಯಾಧ್ಯಕ್ಷರಾದ ಅರ್ಫಿದ್ ಅಡ್ಕಾರ್ ಮುಂತಾದವರು ಉಪಸ್ಥಿತರಿದ್ದರು