janadhvani

Kannada Online News Paper

ಅನ್ಸಾರುಲ್ ಮುಸ್ಲಿಮೀನ್ ಕೋಲ್ಪೆ- ಇಡ್ಕಿದು:ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್ ಕೋಲ್ಪೆ- ಇಡ್ಕಿದು ಇದರ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೊಂದಣಿ ಅಭಿಯಾನ ಕಾರ್ಯಕ್ರಮವು ಆ.30ರಂದು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸ್ಥಳೀಯ ಜಮಾಅತ್ ಖತೀಬರಾದ ಬಹು| ನಿಸಾರ್ ಸಖಾಫಿ- ಅಲ್ ಅಝ್ಹ‌ರಿಯವರು ದುಆ ಕಾರ್ಯಕ್ರಮದೊಂದಿಗೆ ಉದ್ಘಾಟಿಸಿದರು. ಬದ್ರಿಯಾ ಜುಮಾ ಮಸೀದಿ ಇದರ ಅಧ್ಯಕ್ಷರಾದ ಶೇಖಬ್ಬ ಕೋಲ್ಪೆ ಆಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದರು.

ಜಮಾಅತ್ ಉಪಾಧ್ಯಕ್ಷರು ಸುಲೈಮಾನ್ ಕೋಲ್ಪೆ . ಪ್ರಧಾನ ಕಾರ್ಯದರ್ಶಿ ಲತೀಫ್ ದಲ್ಕಾಜೆ, ಕೋಶಾಧಿಕಾರಿ ಹಕೀಂ ಕೋಲ್ಪೆ , ಹಿರಿಯರಾದ ಅಬ್ಬಾಸ್ ಕೋಲ್ಪೆ. ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್ ಇದರ ಅಧ್ಯಕ್ಷರಾದ ಅಜಿನಾಸ್ ಕೋಲ್ಪೆ, ಕಾರ್ಯದರ್ಶಿ ಆಸೀಫ್ ಕೋಲ್ಪೆ. ಸದಸ್ಯರಾದ ಬಶೀರ್ ಸಹದಿ . ನಿಸಾರ್, ಬಷೀರ್ ಅಕ್ಕರೆ, ಶರೀಫ್ ಬೆಂಗಳೂರು, ಅಬ್ಬಾಸ್ ಬೆಂಗಳೂರು , ಪರಾಝ್, ಬಶೀರ್ ಸುಲೈಮಾನ್ ಹಾಗೂ ಇನ್ನೂರಕ್ಕಿಂತಲೂ ಅಧಿಕ ಫಲಾನುಭವಿಗಳು ಮತ್ತು ಹಿತೈಷಿಗಳು ಭಾಗವಹಿಸಿದರು.

ಸದರ್ ಉಸ್ತಾದ್ ಉಮ‌ರ್ ಮುಸ್ಲಿಯಾರ್ ಸ್ವಾಗತಿಸಿ, ನೌಶಾದ್ ಕೋಲ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !! Not allowed copy content from janadhvani.com